ಕನ್ನಡ ಕಿರುತೆರೆಯಲ್ಲಿ ಈಗ ಹೊಸ ಧಾರಾವಾಹಿಗಳದ್ದೇ ಕಾರುಬಾರು. ಸತ್ಯ, ಹೂಮಳೆ ಹೀಗೆ ಹಲವು ಧಾರಾವಾಹಿಗಳು ಆರಂಭವಾಗಿ ಜನಮನ ಗೆದ್ದಿದ್ದವು. ಇನ್ನೂ ಹಲವು ಧಾರಾವಾಹಿಗಳು ಪ್ರಸಾರವಾಗಲು ಸಜ್ಜಾಗಿವೆ. ಈಗ ಮಗದೊಂದು ಹೊಸ ಧಾರಾವಾಹಿ ಸದ್ಯದಲ್ಲಿಯೇ ಆರಂಭವಾಗಲಿದೆ. ಜನವರಿ 4 ರಿಂದ "ರುಕ್ಕು" ಧಾರಾವಾಹಿಯು ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಅಕ್ಕ-ತಂಗಿಯರ ನಡುವಿನ ಭಾಂದವ್ಯದ ಕಥೆಯನ್ನು ಹೊಂದಿರುವ ರುಕ್ಕು ಧಾರಾವಾಹಿಯ ಪ್ರೋಮೋಗಳನ್ನು ಚಾನೆಲ್ ಈಗಾಗಲೇ ಬಿಡುಗಡೆ ಮಾಡಿದ್ದು ವೀಕ್ಷಕರ ಕಡೆಯಿಂದ ಮೆಚ್ಚುಗೆಯ ಸುರಿಮಳೆ ದೊರಕಿತ್ತು. ತಂಗಿ ರಾಧಿಕಾಗೆ ಮುರಳಿ ಎಂದರೆ ಇಷ್ಟ. ಆತನನ್ನು ಮನಸಾರೆ ಪ್ರೀತಿ ಮಾಡುತ್ತಿರುತ್ತಾಳೆ. ಇತ್ತ ಅಚಾನಕ್ ಆಗಿ ಅಕ್ಕನಿಗೂ ಅದೇ ಹುಡುಗನೊಂದಿಗೆ ಮದುವೆ ನಿಶ್ಚಯವಾಗಿರುತ್ತದೆ. ಜೀವಕ್ಕಿಂತಲೂ ಜಾಸ್ತಿಯಾಗಿ ಪ್ರೀತಿಸಿ, ಸಾಕಿ ಸಲಹಿದ ಅಕ್ಕ ರುಕ್ಕುಗಾಗಿ ತನ್ನ ಪ್ರೀತಿಯನ್ನೇ ಬಿಟ್ಟುಕೊಡಲಿದ್ದಾಳಾ ತಂಗಿ ರಾಧಿಕಾ? ಎಂಬುದಕ್ಕೆಲ್ಲಾ ಮುಂದಿನ ದಿನಗಳಲ್ಲಿ ಉತ್ತರ ದೊರಕಲಿದೆ.