ಒಂದೇ ಒಂದು ಆ್ಯಕ್ಷನ್ ಸಿಕ್ವೆನ್ಸ್ ದೃಶ್ಯ ಸೆರೆ ಹಿಡಿಯಲು ನಿರ್ದೇಶಕ ಎಸ್ ಶಂಕರ್ ಇಷ್ಟು ದೊಡ್ಡ ಮೊತ್ತದ ಸೆಟ್ ಹಾಕಿಸಿದ್ದು ಇದೇ ಮೊದಲಂತೆ! ಮುಖ್ಯ ನಟ ಹಾಗೂ ನಟಿಯರನ್ನು ಹೊರತುಪಡಿಸಿ ಇಲ್ಲಿ ಒಟ್ಟು 2,000 ಸಹ ಕಲಾವಿದರು ಭಾಗವಹಿಸಲಿದ್ದಾರೆ ಎಂಬ ಮಾಹಿತಿ ದೊರತಿದೆ. ಸುಮಾರು 25 ದಿನಗಳ ಕಾಲ ಇದೇ ಸೆಟ್ನಲ್ಲಿಯೇ ಚಿತ್ರೀಕರಣ ನಡೆಯಲಿದೆ ಅನ್ನೋದು ಲೇಟೆಸ್ಟ್ ಇನ್ಪರ್ಮೇಶನ್.
ಸಿನಿ ಜರ್ನಿಯಲ್ಲಿಯೇ ಕಮಲ್ ಹಾಸನ್ ಚಿತ್ರಕ್ಕೆ ದೊಡ್ಡ ಮೊತ್ತದ ಸೆಟ್! - ಇಂಡಿಯನ್ 2 ಸಿನಿಮಾದ ಬೃಹದಾಕಾರದ ಸೆಟ್
ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ಸಾಗುತ್ತಿದೆ. ಚಿತ್ರ ತಂಡ ಈಗ ಮಧ್ಯಪ್ರದೇಶದ ಭೋಪಾಲ್ನಲ್ಲಿ ಬೀಡು ಬಿಟ್ಟಿದ್ದು, ಸುಮಾರು 40 ಕೋಟಿ ರೂ. ಬಜೆಟ್ನ ಬೃಹದಾಕಾರದ ಸೆಟ್ ಹಾಕಿದೆಯಂತೆ. ಇದು ನಿರ್ದೇಶಕ ಎಸ್ ಶಂಕರ್ ಅವರ ಸಿನಿ ಜರ್ನಿಯಲ್ಲಿಯೇ ದೊಡ್ಡ ಮೊತ್ತದ ಸೆಟ್ ಅಂತೆ.
ಮಲ್ ಹಾಸನ್ - ಸಂಗ್ರಹ ಚಿತ್ರ
ಇಂಡಿಯನ್ 2’ನಲ್ಲಿ ಕಾಜಲ್ ಅಗರವಾಲ್, ಕಮಲ್ ಹಾಸನ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಿದ್ದಾರ್ಥ್, ರಕುಲ್‌ಪ್ರೀತ್ ಸಿಂಗ್, ಸೇರಿದಂತೆ ಇತರರು ಚಿತ್ರದಲ್ಲಿದ್ದಾರೆ. ಮುಖ್ಯಪಾತ್ರವೊಂದರಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್ ಸಹ ಕಾಣಿಸಿಕೊಳ್ಳಲಿದ್ದಾರಂತೆ. ಚಿತ್ರವನ್ನು 2020 ರ ಅಂತ್ಯದ ವೇಳೆಗೆ ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ನಡೆಸಿದೆ.