ಕರ್ನಾಟಕ

karnataka

ETV Bharat / sitara

'ಎಲಾವುನ್ನಾರು? ಆರ್‌ಆರ್‌ಆರ್‌ ಟ್ರೈಲರ್‌ ಪಗಿಲಿಪೊಯಿಂದಿ..' RRR ಪ್ರಚಾರದಲ್ಲಿ ಆಲಿಯಾ ಮಿಂಚು.. - ಹೈದರಾಬಾದ್​ನಲ್ಲಿ ಆರ್‌ಆರ್‌ಆರ್‌ ಪ್ರಚಾರ

ರಾಜಮೌಳಿ, ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿಯಾಗಿದೆ ಎಂದು ಆಲಿಯಾ ಭಟ್​ ತಿಳಿಸಿದರು..

RRR team is busy in film promotion
ಭರ್ಜರಿ ಪ್ರಚಾರದಲ್ಲಿ ತೊಡಗಿದ RRR ಚಿತ್ರತಂಡ

By

Published : Dec 11, 2021, 7:56 PM IST

ಹೈದರಾಬಾದ್(ತೆಲಂಗಾಣ):ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್‌ಆರ್‌ಆರ್‌’ (RRR) ಚಿತ್ರದ ಟ್ರೈಲರ್ ನಿನ್ನೆ ಬಿಡುಗಡೆಯಾಗಿದೆ. ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಚಿತ್ರತಂಡ ಚಿತ್ರದ ಪ್ರಚಾರದಲ್ಲಿ ತೊಡಗಿದ್ದು, ನಿರೀಕ್ಷೆ ದುಪ್ಪಟ್ಟಾಗಿದೆ. ಟ್ರೇಲರ್ ಅನ್ನು ಅನಾವರಣಗೊಳಿಸಿದ ನಂತರ ನಿರ್ದೇಶಕ ಎಸ್.ಎಸ್.ರಾಜಮೌಳಿ ತಮ್ಮ ತಂಡದೊಂದಿಗೆ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಆರ್‌ಆರ್‌ಆರ್ ಚಿತ್ರ ತಂಡವು ಇಂದು ಟಾಲಿವುಡ್ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ್ದು, ಆಲಿಯಾ ಭಟ್ ಅವರು ನಿರ್ದೇಶಕ ರಾಜಮೌಳಿ ಮತ್ತು ಸಹನಟರಾದ ರಾಮ್ ಚರಣ್ ಮತ್ತು ಜೂ. ಎನ್‌ಟಿಆರ್ ಅವರೊಂದಿಗೆ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡರು.

ಆಲಿಯಾ ತೆಲುಗಿನಲ್ಲಿ ಮಾತನಾಡುತ್ತಾ ಎಲ್ಲರನ್ನೂ ಆಕರ್ಷಿಸಿದರು. "ಎಲಾವುನ್ನಾರು? ಆರ್‌ಆರ್‌ಆರ್ ಟ್ರೈಲರ್ ಪಗಿಲಿಪೊಯಿಂದಿ" ಎಂದು ಆಲಿಯಾ ಭಟ್ ಮಾತನ್ನು​​​ ಪ್ರಾರಂಭಿಸಿದರು.

ಭರ್ಜರಿ ಪ್ರಚಾರದಲ್ಲಿ ತೊಡಗಿದ RRR ಚಿತ್ರತಂಡ

ಆಲಿಯಾ ಒಂದು ವರ್ಷದಲ್ಲಿ ತೆಲುಗು ಕಲಿತಿದ್ದಾರೆಂದು ನಿರ್ದೇಶಕ ರಾಜಮೌಳಿ ಹೊಗಳಿದರು. ಆಗ ಆಲಿಯಾ ಮಾತನಾಡಿ, ಲಾಕ್‌ಡೌನ್ ಸಮಯದಲ್ಲಿ ನಾನು ಜೂಮ್ ಕರೆಗಳ ಮೂಲಕ ತೆಲುಗು ಮಾತನಾಡಲು ಕಲಿತಿದ್ದೇನೆ.

ನಾನು ರಾಜಮೌಳಿ ಸರ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ನಾವು ತೆಲುಗು ಭಾಷೆಯಲ್ಲಿ ಸಂವಹನ ನಡೆಸಲು ಡಿಜಿಟಲ್ ಫ್ಲಾಟ್​ಪಾರ್ಮ್ ಬಳಸಲು ಪ್ರಯತ್ನಿಸಿದ್ದೇವೆ ಎಂದು ಆಲಿಯಾ ಹೇಳಿದರು.

ಇದನ್ನೂ ಓದಿ:''R'' ನಿಮ್ಮ ಲಕ್ಕಿ ಅಕ್ಷರವೇ? ಮಾಧ್ಯಮದವರ ಪ್ರಶ್ನೆಗೆ ನಾಚಿ ನೀರಾದ ಆಲಿಯಾ ಭಟ್

ಸೆಟ್‌ನಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ನಡುವಿನ ಬಾಂಧವ್ಯ ಉತ್ತಮವಾಗಿತ್ತು. ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಜೊತೆ ಕೆಲಸ ಮಾಡಿದ್ದು ತುಂಬಾ ಖುಷಿಯಾಗಿದೆ. ಆದ್ರೆ, ಅವರು ಪರಸ್ಪರ ಮಾತುಕತೆಯಲ್ಲಿ ಮಗ್ನರಾಗಿ, ನನ್ನನ್ನು ನಿರ್ಲಕ್ಷಿಸಿದರು ಎಂದು ನಗುತ್ತಲೇ ಹೇಳಿದರು. ಈ ಮಾತುಕತೆ ಚಿತ್ರತಂಡ ನಗುವಂತೆ ಮಾಡಿತು.

ABOUT THE AUTHOR

...view details