ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ದೇಶಾದ್ಯಂತ ಸ್ವಜನಪಕ್ಷಪಾತದ ಬಗ್ಗೆ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಸ್ಟಾರ್ ಕಿಡ್ಗಳ ಮೇಲೆ ಸುಶಾಂತ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸ್ಟಾರ್ ಕಿಡ್ಗಳ ಚಿತ್ರಗಳನ್ನು ಬಹಿಷ್ಕರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ.
ಈ ನಡುವೆ ಎಸ್.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್ಆರ್ಆರ್' ಚಿತ್ರದಲ್ಲೂ ಆಲಿಯಾ ಭಟ್ ನಟಿಸುತ್ತಿದ್ದು ಚಿತ್ರದಲ್ಲಿ ಆಲಿಯಾ ಬದಲಿಗೆ ಬೇರೆ ನಟಿಯನ್ನು ಕರೆ ತರಲು ಚಿತ್ರತಂಡ ಯೋಚಿಸುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಮೂಲವೊಂದರ ಪ್ರಕಾರ ಆಲಿಯಾ ಭಟ್ ಜಾಗಕ್ಕೆ ಪ್ರಿಯಾಂಕ ಛೋಪ್ರಾ ಅವರನ್ನು ಕರೆತರಲು ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ ಎನ್ನಲಾಗಿದೆ.
ಮಹೇಶ್ ಭಟ್ ನಿರ್ದೇಶನದಲ್ಲಿ ಆಲಿಯಾ ಭಟ್ ನಟಿಸುತ್ತಿರುವ 'ಸಡಕ್-2' ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಆದರೆ ಟ್ರೇಲರ್ಗೆ ನಿರೀಕ್ಷಿಸಿದಷ್ಟು ವೀಕ್ಷಣೆ ದೊರೆತಿಲ್ಲ. ಇನ್ನು ಆಲಿಯಾ ಭಟ್ ಚಿತ್ರವನ್ನು ಬಹಿಷ್ಕರಿಸಲು ಸುಶಾಂತ್ ಅಭಿಮಾನಿಗಳು ನಿರ್ಧರಿಸಿರುವುದರಿಂದ ಈ ಪರಿಣಾಮ 'ಆರ್ಆರ್ಆರ್' ಚಿತ್ರದ ಮೇಲೂ ಬೀಳುವ ಭಯ ಕಾಡತೊಡಗಿದೆ. ಆದ್ದರಿಂದ ಚಿತ್ರತಂಡ ಆಲಿಯಾ ಭಟ್ ಅವರನ್ನು ಚಿತ್ರದಿಂದ ಕೈ ಬಿಡಲು ನಿರ್ಧರಿಸಿದೆ.