ಕರ್ನಾಟಕ

karnataka

ETV Bharat / sitara

ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಚಿತ್ರ 'ಆರ್​​ಆರ್​​ಆರ್'​​ ಬಿಡುಗಡೆಗೆ ದಿನಾಂಕ ಫಿಕ್ಸ್​​​​​​​​​​​​​​​​​​​​​ - ರಾಮ್​​ಚರಣ್ ತೇಜ ಅಭಿನಯದ ಸಿನಿಮಾ

ರಾಮ್​​ಚರಣ್ ತೇಜ ಹಾಗೂ ಜ್ಯೂ. ಎನ್​​​ಟಿಆರ್​​ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 'ಆರ್​​ಆರ್​ಆರ್' ಸಿನಿಮಾ ಇದೇ ವರ್ಷ ಅಕ್ಟೋಬರ್ 13 ರಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಬಿಡುಗಡೆ ವಿಚಾರವನ್ನು ಚಿತ್ರತಂಡ ತನ್ನ ಅಫಿಶಿಯಲ್ ಇನ್ಸ್ಟಾಗ್ರಾಮ್ ಅಕೌಂಟ್​​​ನಲ್ಲಿ ಘೋಷಿಸಿದೆ.

RRR
'ಆರ್​​ಆರ್​​ಆರ್'​​

By

Published : Jan 25, 2021, 4:49 PM IST

ಹೈದರಾಬಾದ್​​: ಸ್ಟಾರ್ ನಿರ್ದೇಶಕ ಎಸ್​​.ಎಸ್. ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ಆರ್​​ಆರ್​​ಆರ್'​​​​​​​​ ಚಿತ್ರತಂಡದಿಂದ ಕೊನೆಗೂ ಸಿನಿಪ್ರಿಯರಿಗೆ ಸಿಹಿಸುದ್ದಿ ದೊರೆತಿದೆ. ರಾಮ್​ಚರಣ್ ತೇಜ ಹಾಗೂ ಜ್ಯೂನಿಯರ್ ಎನ್​​ಟಿಆರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ 'ಆರ್​​ಆರ್​ಆರ್'​​​​ ಬಿಡುಗಡೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ.

ಇದೇ ವರ್ಷ ಅಕ್ಟೋಬರ್ 13 ರಂದು ಸಿನಿಮಾ ಬಿಡುಗಡೆಯಾಗಲಿದ್ದು 'ಆರ್​​ಆರ್​​​​​​​​​​​​​​​​ಆರ್'​ ಅಫಿಷಿಯಲ್ ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡಿದೆ. "ಅಕ್ಟೋಬರ್ 13, ಬೆಂಕಿ ಹಾಗೂ ನೀರು ಬಲವಾಗಿ ಜೊತೆ ಸೇರಿ ಬರುತ್ತಿದೆ ಎಂದು ಸ್ಟೇಟಸ್ ಹಾಕಿಕೊಂಡಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಈ ಸಿನಿಮಾ ಒಂದು ಇತಿಹಾಸ ನಿರ್ಮಿಸಲು ಸಜ್ಜಾಗಿದೆ, ದಿ ರೈಡ್ ಬಿಗಿನ್ಸ್" ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟರ್​​​ನಲ್ಲಿ ರಾಮ್​​ಚರಣ್ ತೇಜ ಕುದುರೆ ಮೇಲೆ ಹಾಗೂ ಜ್ಯೂನಿಯರ್ ಎನ್​​ಟಿಆರ್​ ಸ್ಕೂಟರ್​​​​ನಲ್ಲಿ ಬಹಳ ವೇಗವಾಗಿ ಬರುತ್ತಿರುವಂತ ದೃಶ್ಯವಿದೆ. ಚಿತ್ರತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಅನೌನ್ಸ್ ಮಾಡುತ್ತಲೇ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:'ಫ್ಯಾಂಟಮ್' ಚಿತ್ರ 'ವಿಕ್ರಾಂತ್​ ರೋಣ' ಯಾಕಾಯಿತು? ಖುದ್ದು ಸುದೀಪ್​, ಭಂಡಾರಿ ಸ್ಪಷ್ಟನೆ ಹೀಗಿದೆ

ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲುರಿ ಸೀತಾರಾಮ ರಾಜು ಹಾಗೂ ಕೋಮರಂ ಭೀಮ ಜೀವನಾಧಾರಿತ ಸಿನಿಮಾವೇ 'ಆರ್​​ಆರ್​ಆರ್'. ಚಿತ್ರದಲ್ಲಿ ರಾಮ್​​​ಚರಣ್ ಹಾಗೂ ಜ್ಯೂ. ಎನ್​​ಟಿಆರ್ ಜೊತೆಗೆ ಬಾಲಿವುಡ್​ ನಟರಾದ ಅಜಯ್ ದೇವಗನ್ ಆಲಿಯಾ ಭಟ್ ಹಾಗೂ ಇನ್ನಿತರರು ನಟಿಸಿದ್ದಾರೆ. ಅಂತಾರಾಷ್ಟ್ರೀಯ ನಟರಾದ ರೇ ಸ್ಟೀವನ್​​​ಸನ್​​ ಹಾಗೂ ಅಲಿಸನ್​​ ಡೂಡಿ ಕೂಡಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಶೀಘ್ರದಲ್ಲೇ ಚಿತ್ರತಂಡ ಸಿನಿಮಾದ ಟೀಸರ್ ಬಿಡುಗಡೆ ಮಾಡಲಿದೆ.

ABOUT THE AUTHOR

...view details