ಕರ್ನಾಟಕ

karnataka

ETV Bharat / sitara

ಕ್ಲೈಮ್ಯಾಕ್ಸ್​​​ ಶೂಟಿಂಗ್​​ನಲ್ಲಿ ಆರ್​ಆರ್​ಆರ್​​: ಫೋಟೋ ವೈರಲ್​​​ - ram charan latest news

ಆರ್​ಆರ್​ಆರ್​​ ಸಿನಿಮಾ ಕ್ಲೈಮ್ಯಾಕ್ಸ್​​ ಹಂತಕ್ಕೆ ತಲುಪಿದೆ. ರಾಮೋಜಿ ಫಿಲ್ಮ್​​ ಸಿಟಿಯಲ್ಲಿ ಕೊನೆಯ ಹಂತದ ಶೂಟಿಂಗ್​ ನಡೆಯುತ್ತಿದ್ದು, ಚಿತ್ರೀಕರಣ ಸಮಯದ ರಾಮ್​ ಚರಣ್​ ಮತ್ತು ಜೂ. ಎನ್​ಟಿಆರ್​​ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಕ್ಲೈಮ್ಯಾಕ್ಸ್​​​ ಶೂಟಿಂಗ್​​ನಲ್ಲಿ ಆರ್​ಆರ್​ಆರ್​​ : ಫೋಟೋ ವೈರಲ್​​​
ಕ್ಲೈಮ್ಯಾಕ್ಸ್​​​ ಶೂಟಿಂಗ್​​ನಲ್ಲಿ ಆರ್​ಆರ್​ಆರ್​​ : ಫೋಟೋ ವೈರಲ್​​​

By

Published : Feb 5, 2021, 6:41 PM IST

ರಾಜಮೌಳಿ ನಿರ್ದೇಶನದ ಆರ್​ಆರ್​ಆರ್​​ ಸಿನಿಮಾ ಕ್ಲೈಮ್ಯಾಕ್ಸ್​​ ಹಂತಕ್ಕೆ ತಲುಪಿದೆ. ಹೈದರಾಬಾದ್​ನ ರಾಮೋಜಿ ಫಿಲ್ಮ್​​ ಸಿಟಿಯಲ್ಲಿ ಕೊನೆಯ ಹಂತದ ಶೂಟಿಂಗ್​ ನಡೆಯುತ್ತಿದ್ದು, ಚಿತ್ರೀಕರಣ ಸಮಯದ ರಾಮ್​ ಚರಣ್​ ಮತ್ತು ಜೂ. ಎನ್​ಟಿಆರ್​​ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಇನ್​​ಸ್ಟಾಗ್ರಾಂ​​​ನಲ್ಲಿ ಚಿತ್ರತಂಡ ಈ ಇಬ್ಬರು ನಟರ ಫೋಟೋ ಹಂಚಿಕೊಂಡಿದ್ದು, ಕ್ಲೈಮ್ಯಾಕ್ಸ್​​ ಶೂಟಿಂಗ್​ಗೆ ಅಭ್ಯಾಸ ನಡೆಸುವಾಗ ತೆಗೆದ ಫೋಟೋ ಎಂದು ಬರೆಯಲಾಗಿದೆ. ಇನ್ನು ಕ್ಲೈಮ್ಯಾಕ್ಸ್​​ ಶೂಟಿಂಗ್​ ಕಳೆದ ಜನವರಿ 19ರಿಂದ ಶುರು ಮಾಡಲಾಗಿದೆ. ಸಿನಿಮಾದಲ್ಲಿ ರಾಮ್​​ಚರಣ್​​​​​, ಜೂ. ಎನ್​ಟಿಆರ್​ ಜೊತೆಗೆ ಬಾಲಿವುಡ್​​ನ ಖ್ಯಾತ ಕಲಾವಿದರಾದ ಆಲಿಯಾ ಭಟ್​​ ಮತ್ತು ಅಜಯ್​ ದೇವಗನ್​ ಕೂಡ ನಟಿಸಿದ್ದಾರೆ.

ಇತ್ತೀಚೆಗೆ ಆರ್​ಆರ್​ಆರ್​​ ಸಿನಿಮಾದ ರಿಲೀಸ್​​ ದಿನಾಂಕವನ್ನು ಪ್ರಕಟ ಮಾಡಿರುವ ಚಿತ್ರತಂಡ, ಇದೇ ವರ್ಷ ಅಕ್ಟೋಬರ್ 13ರಂದು ಸಿನಿಮಾವನ್ನು ತೆರೆ ಮೇಲೆ ತರಲು ನಿರ್ಧರಿಸಿದೆ.

ABOUT THE AUTHOR

...view details