ಕರ್ನಾಟಕ

karnataka

ETV Bharat / sitara

ಫೈಟಿಂಗ್​​​ ಚಿತ್ರೀಕರಣದ ಫೋಟೋ ರಿಲೀಸ್​ ಮಾಡಿದ 'RRR' ಚಿತ್ರತಂಡ! - ಆರ್​​ಆರ್​​ಆರ್​​​ ಸಿನಿಮಾ ಸುದ್ದಿ

ಆರ್​ಆರ್​ಆರ್​ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡುತ್ತಿದ್ದು, 350 ಕೋಟಿ ವೆಚ್ಚದಲ್ಲಿ ಡಿವಿವಿ ದಾನಯ್ಯ ನಿರ್ಮಾಣ ಮಾಡುತ್ತಿದ್ದಾರೆ..

ಫೈಟಿಂಗ್​​​ ಚಿತ್ರೀಕರಣದ ಫೋಟೋ ರಿಲೀಸ್​ ಮಾಡಿದ 'RRR'  ಚಿತ್ರತಂಡ!
ಫೈಟಿಂಗ್​​​ ಚಿತ್ರೀಕರಣದ ಫೋಟೋ ರಿಲೀಸ್​ ಮಾಡಿದ 'RRR' ಚಿತ್ರತಂಡ!

By

Published : Jan 19, 2021, 5:58 PM IST

ರಾಮ್​​ಚರಣ್​​ ಮತ್ತು ಜೂ.ಎನ್​ಟಿಆರ್​​ ನಟನೆಯ ಬಹುನಿರೀಕ್ಷಿತ ಸಿನಿಮಾ ಆರ್​ಆರ್​ಆರ್​ ದಿನದಿಂದ ದಿನಕ್ಕೆ ಕುತೂಹಲಗಳನ್ನು ಹೆಚ್ಚಿಸುತ್ತಿದೆ. ಆರ್​ಆರ್​ಆರ್​ ಚಿತ್ರದ ಕ್ಲೈಮ್ಯಾಕ್ಸ್​ ಶೂಟಿಂಗ್​ ಇಂದಿನಿಂದ ಶುರುವಾಗಿದ್ದು, ಈ ಮಾಹಿತಿಯನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.

ಆರ್​ಆರ್​ಆರ್​ ಚಿತ್ರತಂಡ

ಈ ಬಗ್ಗೆ ಟ್ವಿಟರ್​​ನಲ್ಲಿ ಮಾಹಿತಿ ನೀಡಿರುವ ಚಿತ್ರತಂಡ, ಚಿತ್ರದ ಪ್ರಮುಖ ಹಂತದ ಕ್ಲೈಮ್ಯಾಕ್ಸ್​ಶೂಟಿಂಗ್​ ಶುರುವಾಗಿದೆ. ಕೋಮುರಾಮ್​ ಭೀಮ್​ ಮತ್ತು ಸೀತಾ ರಾಮರಾಜು ಇಬ್ಬರು ಸೇರಿಕೊಂಡು ಸಾಧನೆ ಮಾಡಲು ಹೊರಟಿದ್ದಾರೆ. ಅತಿ ಶೀಘ್ರದಲ್ಲಿ ದೊಡ್ಡ ಪರದೆ ಮೇಲೆ ಬರುತ್ತೇವೆ ಎಂದು ಬರೆದುಕೊಂಡಿದ್ದಾರೆ.

ಸದ್ಯ ಚಿತ್ರತಂಡ ರಿಲೀಸ್​ ಮಾಡಿರುವ ಫೋಟೋದಲ್ಲಿ ಕೋಮುರಾಮ್​ ಭೀಮ್​ ಮತ್ತು ರಾಮರಾಜು ಜೊತೆಯಾಗಿ ಫೈಟ್​ ಮಾಡುತ್ತಿದ್ದಾರೆ. ಅವರ ಕೈಗಳು ರಕ್ತದಿಂದ ಕೂಡಿದ್ದು, ಈ ಯುದ್ದದ ಸೀನ್​​​ ಸಿನಿಮಾದಲ್ಲಿ ಸಖತ್​​ ಥ್ರಿಲ್​​ ನೀಡಬಹುದೆಂದು ಊಹಿಸಬಹುದು.

ಆಲಿಯಾ ಭಟ್​​ ಮತ್ತು ರಾಜಮೌಳಿ

ಮತ್ತೊಂದು ಮಾಹಿತಿ ಪ್ರಕಾರ ಕ್ಲೈಮ್ಯಾಕ್ಸ್​ ಭಾಗದ ಶೂಟಿಂಗ್​ ಮುಗಿದ ಮೇಲೆ ರಾಮ್​​ಚರಣ್​ ಮತ್ತು ಆಲಿಯಾ ಭಟ್​​ ನಡುವಿನ ಹಾಡೊಂದರ ಶೂಟಿಂಗ್‌ ಫೆಬ್ರವರಿಯಲ್ಲಿ ಮಾಡಲಾಗುವುದು ಎಂದು ಹೇಳಲಾಗಿದೆ.

ಆರ್​ಆರ್​ಆರ್​ ಚಿತ್ರತಂಡ

ಆರ್​ಆರ್​ಆರ್​ ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡುತ್ತಿದ್ದು, 350 ಕೋಟಿ ವೆಚ್ಚದಲ್ಲಿ ಡಿವಿವಿ ದಾನಯ್ಯ ನಿರ್ಮಾಣ ಮಾಡುತ್ತಿದ್ದಾರೆ.

ರಾಮ್​​ಚರಣ್​​​​ ಮತ್ತು ಜೂ.ಎನ್​ಟಿಆರ್​

ABOUT THE AUTHOR

...view details