ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ 'ಆರ್‌ಆರ್‌ಆರ್' ಸಿನಿಮಾ ಸಿನಿ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಬಿಗ್ ಬಜೆಟ್ನಲ್ಲಿ ನಿರ್ಮಾಣವಾಗಿರುವ ಚಿತ್ರ ಇದಾಗಿದೆ. ಕೆಲ ದಿನಗಳ ಹಿಂದೆ ಬಿಡುಗಡೆಯಾದ ನಾಟು... ನಾಟು ಹಾಡು ಯೂಟ್ಯೂಬ್ನಲ್ಲಿ ದಾಖಲೆ ಸೃಷ್ಟಿಸಿದೆ.
ನ.10ರಂದು ಆರ್‌ಆರ್‌ಆರ್ ಚಿತ್ರತಂಡ ನಾಟು.. ನಾಟು ಹಾಡನ್ನು ತೆಲುಗು, ತಮಿಳು, ಹಿಂದಿ, ಮಲಯಾಳಂ, ಕನ್ನಡದಲ್ಲಿ ರಿಲೀಸ್ ಮಾಡಿತ್ತು. ಅಂದಿನಿಂದ ಇಂದಿನವರಗೆ ಎಲ್ಲಾ ಭಾಷೆಗಳನ್ನೂ ಒಗ್ಗೂಡಿಸಿ ಯೂಟ್ಯೂಬ್ನಲ್ಲಿ ಬರೋಬ್ಬರಿ 30 ಮಿಲಿಯನ್ ಗಡಿ ದಾಟಿದೆ.