ಕರ್ನಾಟಕ

karnataka

ETV Bharat / sitara

'RRR' ರಿಲೀಸ್‌ಗೆ ಹೊಸ ದಿನಾಂಕ ಫಿಕ್ಸ್‌.. ಅಂದಾದ್ರೂ ಬಿಡುಗಡೆಯಾಗುತ್ತಾ ಚಿತ್ರ? - rrr announces new release date

ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಬಿಗ್ ಬಜೆಟ್ ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಹಾಗೂ ಜೂ.ಎನ್‌ಟಿಆರ್ ಕೋಮರಂ ಭೀಮನಾಗಿ ನಟಿಸಿದ್ದಾರೆ. ನಾಯಕಿಯರಾಗಿ ಆಲಿಯಾ ಭಟ್ ಮತ್ತು ಒಲಿವಿಯಾ ಮೋರಿಸ್ ನಟಿಸಿದ್ದಾರೆ..

rrr announces new release date
'RRR' ರಿಲೀಸ್‌ಗೆ ಹೊಸ ದಿನಾಂಕ ಫಿಕ್ಸ್‌... ಅಂದಾದ್ರೂ ಬಿಡುಗಡೆಯಾಗುತ್ತಾ?

By

Published : Jan 21, 2022, 7:59 PM IST

ಹೈದರಾಬಾದ್‌ :ಯಂಗ್ ಟೈಗರ್ ಎನ್‌ಟಿಆರ್, ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಟಿಸಿರುವ ಬಹು ನಿರೀಕ್ಷಿತ ಚಿತ್ರ 'RRR' ರಿಲೀಸ್‌ಗೆ ಹೊಸ ಡೇಟ್‌ ಫಿಕ್ಸ್‌ ಆಗಿದೆ.

ಈಗಾಗಲೇ ಹಲವು ಬಾರಿ ಬಿಡುಗಡೆ ದಿನಾಂಕವನ್ನು ಮುಂದೂಡಿರುವ ಈ ಚಿತ್ರ ತಂಡ ಇದೀಗ ಹೊಸದಾಗಿ ಸಿನಿಮಾ ಬಿಡುಗಡೆಯ ದಿನಾಂಕವನ್ನು ಅಭಿಮಾನಿಗಳ ಮುಂದಿಟ್ಟಿದೆ.

ದೇಶದಲ್ಲಿ ಕೊರೊನಾ ಪರಿಸ್ಥಿತಿ ಸುಧಾರಿಸಿದರೆ ಮಾರ್ಚ್ 28 ಇಲ್ಲವೇ ಏಪ್ರಿಲ್ 28 ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಟ್ವೀಟ್‌ ಮಾಡಿದೆ.

ಈ ಮೊದಲು ಜನವರಿ 7ರಂದು ಆರ್‌ಆರ್‌ಆರ್‌ ಚಿತ್ರ ಬಿಡುಗಡೆ ಮಾಡುವ ಘೋಷಣೆ ಮಾಡಲಾಗಿತ್ತು. ಆದರೆ, ದೇಶದಲ್ಲಿ ಕೋವಿಡ್‌ ಹೆಚ್ಚಾಗಿ ನಿರ್ಬಂಧನಗಳು ಕಠಿಣವಾಗಿರುವುದರಿಂದ ಸಿನಿಮಾ ಬಿಡುಗಡೆಯ ದಿನಾಂಕವನ್ನು ಏಪ್ರಿಲ್‌ಗೆ ಮುಂಡೂಲಾಗಿತ್ತು.

ಇದೀಗ ಥಿಯೇಟರ್‌ಗಳಲ್ಲಿ ಶೇ.100ರಷ್ಟು ಭರ್ತಿಗೆ ಅವಕಾಶ ನೀಡಿದರೆ ಮಾರ್ಚ್‌ 28ಕ್ಕೆ ಬಿಡುಗಡೆ ಮಾಡುತ್ತೇವೆ. ಇಲ್ಲದಿದ್ರೆ ಏಪ್ರಿಲ್‌ 28ಕ್ಕೆ ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರತಂಡ ಹೇಳಿದೆ.

2020ರ ಜುಲೈನಲ್ಲೇ ರಿಲೀಸ್‌ ಆಗಬೇಕಿದ್ದ ಆರ್‌ಆರ್‌ಆರ್‌

2020ರ ಜುಲೈನಲ್ಲಿ ಬಿಡುಗಡೆ ಮಾಡುವುದಾಗಿ 2018ರಲ್ಲೇ ಚಿತ್ರ ತಂಡ ಅಧಿಕೃತವಾಗಿ ಘೋಷಣೆ ಮಾಡಿತ್ತು. ಆ ನಂತರ ಕೋವಿಡ್‌ ಪರಿಣಾಮ ಶೂಟಿಂಗ್ ವಿಳಂಬದಿಂದಾಗಿ ಅಕ್ಟೋಬರ್ 13ಕ್ಕೆ ತೆರೆ ಮೇಲೆ ಆರ್‌ಆರ್‌ಆರ್‌ ಬರುತ್ತೆ ಎಂದು ಹೇಳಲಾಗಿತ್ತು.

ಅಂತಿಮವಾಗಿ 2021ರ ಜನವರಿ 7ಕ್ಕೆ ಬಿಡುಗಡೆ ಮಾಡುವುದಾಗಿ ಹೇಳಿ ಪ್ರೀ ರಿಲೀಸ್‌ ಕಾರ್ಯಕ್ರಮಗಳು, ಪ್ರಚಾರದ ಭರಾಟೆ ಜೋರಾಗಿ ನಡೆದಿತ್ತು. ಆದರೆ, ಒಮಿಕ್ರಾನ್‌ ಬಂದ ಬಳಿಕ ಮತ್ತೆ ಥಿಯೇಟರ್‌ಗಳಲ್ಲಿ ಶೇ.50ರಷ್ಟು ಸಾಮರ್ಥ್ಯದ ನಿರ್ಬಂಧ ವಿಧಿಸಿದ ಪರಿಣಾಮ ಇದೇ ವರ್ಷದ ಏಪ್ರಿಲ್‌ 14ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರ ತಂಡ ಹೇಳಿತ್ತು.

ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಬಿಗ್ ಬಜೆಟ್ ಚಿತ್ರದಲ್ಲಿ ರಾಮ್ ಚರಣ್ ಅಲ್ಲೂರಿ ಸೀತಾರಾಮರಾಜು ಪಾತ್ರದಲ್ಲಿ ಹಾಗೂ ಜೂ.ಎನ್‌ಟಿಆರ್ ಕೋಮರಂ ಭೀಮನಾಗಿ ನಟಿಸಿದ್ದಾರೆ. ನಾಯಕಿಯರಾಗಿ ಆಲಿಯಾ ಭಟ್ ಮತ್ತು ಒಲಿವಿಯಾ ಮೋರಿಸ್ ನಟಿಸಿದ್ದಾರೆ.

ಅಜಯ್ ದೇವಗನ್, ಸಮುದ್ರಖನಿ, ಶ್ರಿಯಾ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ರಾಜಮೌಳಿ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಡಿವಿವಿ ದಾನಯ್ಯ ಹೂಡಿಕೆ ಮಾಡಿದ್ದಾರೆ.

ಜಾಹೀರಾತು:ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

For All Latest Updates

ABOUT THE AUTHOR

...view details