2018ರಲ್ಲಿ ತೆರೆ ಕಂಡ ತಮಿಳಿನ ಮಾರಿ-2 ಚಿತ್ರ ಚಿತ್ರಮಂದಿರದಲ್ಲಿ ದೊಡ್ಡ ಯಶಸ್ಸು ಕಾಣಲಿಲ್ಲ. ಅಂದ್ರೂ ಆ ಚಿತ್ರದ ರೌಡಿ ಬೇಬಿ ಸಾಂಗ್ ಯೂಟೂಬ್ನಲ್ಲಿ ದಾಖಲೆ ಬರೆದಿದೆ.
ದಕ್ಷಿಣ ಭಾರತದಲ್ಲಿ ದಾಖಲೆ ಬರೆದ 'ರೌಡಿ ಬೇಬಿ' - 1 ಬಿಲಿಯನ್ ವೀಕ್ಷಣೆಯಾದ ರೌಡಿ ಬೇಬಿ ಹಾಡು
ರೌಡಿ ಬೇಬಿ ಸಾಂಗ್ ಯೂಟೂಬ್ನಲ್ಲಿ ದಾಖಲೆ ಬರೆದಿದೆ. ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ವೀಕ್ಷಣೆ ಪಡೆದ ಮೊದಲ ಹಾಡು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ಹೌದು, ಧನುಷ್ ಮತ್ತು ಸಾಯಿ ಪಲ್ಲವಿ ಹೆಜ್ಜೆ ಹಾಕಿರುವ ರೌಡಿ ಬೇಬಿ ಹಾಡಿಗೆ ಧನುಷ್ ಮತ್ತು ಧೀ ದನಿಯಾಗಿದ್ದಾರೆ. ಈ ಹಾಡು ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ವೀಕ್ಷಣೆ ಪಡೆದ ಮೊದಲ ಹಾಡು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.
ರೌಡಿ ಬೇಬಿ ಹಾಡಿಗೆ ಪ್ರಭುದೇವ ಕೋರಿಯೋಗ್ರಫಿ ಮಾಡಿದ್ದು, ಮಾರಿ-2 ಸಿನಿಮಾ 2018ರಲ್ಲಿ ಬಿಡುಗಡೆಯಾಗಿತ್ತು. ಈ ಬಗ್ಗೆ ಧನುಷ್ ತಮ್ಮ ಟ್ವಿಟರ್ನಲ್ಲಿ ಖುಷಿ ಹಂಚಿಕೊಂಡಿದ್ದು, ‘ನಾನು ಹಾಡಿದ್ದ ‘ಕೊಲವೆರಿ ಡಿ’ ಹಾಡಿಗೆ ಒಂಭತ್ತು ವರ್ಷ ತುಂಬಿದೆ. ಇದೇ ಸಂದರ್ಭದಲ್ಲಿ ರೌಡಿ ಬೇಬಿ ಸಾಂಗ್ ಒಂದು ಬಿಲಿಯನ್ ವ್ಯೂಸ್ ಪಡೆದಿದ್ದು, ದಕ್ಷಿಣ ಭಾರತದ ಮೊದಲ ಹಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಖುಷಿ ಇಮ್ಮಡಿಯಾಗಿಸಿದೆ ಎಂದಿದ್ದಾರೆ.