ಕರ್ನಾಟಕ

karnataka

ETV Bharat / sitara

ರೂಪಾ ಅಯ್ಯರ್​ಗೆ ದೊಡ್ಡ ಜವಾಬ್ದಾರಿ ನೀಡಿದ ಪ್ರಧಾನಮಂತ್ರಿ ಕಾರ್ಯಾಲಯ - ಕೇಂದ್ರ ಸರ್ಕಾರದ ಯೋಜನೆಗಳಿಗೆ ರೂಪಾ ಅಯ್ಯರ್ ರಾಯಭಾರಿ

ರೂಪಾ ಅಯ್ಯರ್ ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್ ಮಾಡುವ ಸಲುವಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಯೋಜನೆಯೊಂದನ್ನು ನೀಡಿದ್ದರು. ರೂಪಾ ಅವರ ಈ ಕೆಲಸ ಕಾರ್ಯಾಲಯದ ಅಧಿಕಾರಿಗಳಿಗೆ ಮೆಚ್ಚುಗೆಯಾಗಿ ಅವರಿಗೆ ಈ ಜವಾಬ್ದಾರಿ ವಹಿಸಲಾಗಿದೆ ಎನ್ನಲಾಗುತ್ತಿದೆ.

ರೂಪಾ ಅಯ್ಯರ್

By

Published : Nov 11, 2019, 1:53 PM IST

ಸ್ಯಾಂಡಲ್​​​ವುಡ್ ನಟಿ ಹಾಗೂ ನಿರ್ದೇಶಕಿ ರೂಪಾ ಅಯ್ಯರ್ ಅವರಿಗೆ ಕೇಂದ್ರದಿಂದ ದೊಡ್ಡ ಜವಾಬ್ದಾರಿಯೊಂದು ಕೊಡಲಾಗಿದೆ. ಕೇಂದ್ರ ಸರ್ಕಾರದ ಬಹುತೇಕ ಯೋಜನೆಗಳಿಗೆ ರೂಪಾ ಅಯ್ಯರ್ ಅವರನ್ನು ದಕ್ಷಿಣ ಭಾರತದ ಬ್ರಾಂಡ್​​ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ.

ಪ್ರಧಾನಮಂತ್ರಿ ಕಾರ್ಯಾಲಯದಿಂದ ರೂಪಾ ಅಯ್ಯರ್​​​ಗೆ ಪತ್ರ

ಪ್ರಧಾನಮಂತ್ರಿ ಕಾರ್ಯಾಲಯ ರೂಪಾ ಅವರಿಗೆ ಈ ಜವಾಬ್ದಾರಿ ವಹಿಸಿದೆ. ಈ ಪ್ರಕಾರ ಕೇಂದ್ರ ಸರ್ಕಾರದ ಯೋಜನೆಗಳನ್ನು ರೂಪಾ ಅನುಷ್ಠಾನಕ್ಕೆ ತರುವ ಕೆಲಸ ಮಾಡಲಿದ್ದಾರೆ. ಈ ಕುರಿತು ರೂಪಾ ಅವರಿಗೆ ರಾಷ್ಟ್ರೀಯ ಮಹಾಮಂತ್ರಿ ಸಂಘಟನೆಯ ಜಯಘೋಷ್ ದ್ವಿವೇದಿ ಪತ್ರವೊಂದನ್ನು ಬರೆದಿದ್ದಾರೆ. ರೂಪಾ ಅಯ್ಯರ್ 'ಆಯುಷ್ಮಾನ್​ ಭವ' ಯೋಜನೆಯಲ್ಲಿ ಹೆಲ್ತ್​​ ಕಾರ್ಡ್ ದೊರಕಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಹಿಂದೆ ರೂಪಾ ಅಯ್ಯರ್ ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್ ಮಾಡುವ ಸಲುವಾಗಿ ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಯೋಜನೆಯೊಂದನ್ನು ನೀಡಿದ್ದರು. ರೂಪಾ ಅವರ ಈ ಕೆಲಸ ಕಾರ್ಯಾಲಯದ ಅಧಿಕಾರಿಗಳಿಗೆ ಮೆಚ್ಚುಗೆಯಾಗಿ ಅವರಿಗೆ ಈ ಜವಾಬ್ದಾರಿ ವಹಿಸಲಾಗಿದೆ ಎನ್ನಲಾಗುತ್ತಿದೆ.

ರೂಪಾ ಅಯ್ಯರ್

For All Latest Updates

TAGGED:

ABOUT THE AUTHOR

...view details