ಸೆಲಬ್ರಿಟಿಗಳ ಬಗ್ಗೆ ರೂಮರ್ಸ್ ಸಾಮಾನ್ಯ. ಅದೇ ರೀತಿ ಬಹಳ ದಿನಗಳಿಂದ ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾ ಗುಟ್ಟಾ ಹಾಗೂ ತಮಿಳು ನಟ ವಿಷ್ಣುವಿಶಾಲ್ ನಡುವೆ ಏನೋ ನಡೆಯುತ್ತಿದೆ ಎಂಬ ರೂಮರ್ಗೆ ಕೊನೆಗೂ ಫುಲ್ ಸ್ಟಾಪ್ ಬಿದ್ದಿದೆ.
ಅರ್ಧರಾತ್ರಿಯಲ್ಲಿ ಜ್ವಾಲಾ ಗುಟ್ಟಾಗೆ ಗುಟ್ಟಾಗಿ ಉಂಗುರ ತೊಡಿಸಿದ ನಟ ವಿಷ್ಣು ವಿಶಾಲ್ - Vishnu vishal Engagement
ಬ್ಯಾಡ್ಮಿಂಟನ್ ಆಟಗಾರ್ತಿ ಜ್ವಾಲಾಗುಟ್ಟಾ ಹಾಗೂ ತಮಿಳು ಹೀರೋ ವಿಷ್ಣು ವಿಶಾಲ್ ಉಂಗುರ ಬದಲಿಸಿಕೊಂಡಿದ್ದಾರೆ. ಇಂದು ಜ್ವಾಲಾ ಹುಟ್ಟುಹಬ್ಬವಾಗಿದ್ದು ನಿನ್ನೆ ರಾತ್ರಿಯೇ ವಿಷ್ಣುವಿಶಾಲ್ ಜ್ವಾಲಾ ಅವರನ್ನು ಖುದ್ದು ಭೇಟಿ ಮಾಡಿ ಶುಭ ಕೋರಿ ಪ್ರಿಯತಮೆಗೆ ಉಂಗುರ ತೊಡಿಸಿದ್ದಾರೆ.
ನಾವಿಬ್ಬರೂ ಫ್ರೆಂಡ್ಸ್ ಅಷ್ಟೇ ಎಂದು ಹೇಳಿಕೊಂಡು ತಿರುಗುತ್ತಿದ್ದ ಈ ಜೋಡಿ ಇದೀಗ ತಮ್ಮ ಸಂಬಂಧವನ್ನು ಒಪ್ಪಿಕೊಂಡಿದೆ. ಜ್ವಾಲಾಗುಟ್ಟಾಗೆ ವಿಶಾಲ್ ಉಂಗುರ ತೊಡಿಸಿದ್ದಾರೆ. ಇಂದು ಜ್ವಾಲಾ ಗುಟ್ಟಾ ಹುಟ್ಟಿದ ದಿನವಾಗಿದ್ದು ನಟ ವಿಷ್ಣು ವಿಶಾಲ್, ಜ್ವಾಲಾಗೆ ವಿಶ್ ಮಾಡಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದಾರೆ. 'ಜನ್ಮದಿನದ ಶುಭಾಶಯಗಳು ಜ್ವಾಲಾ, ಇದು ನಮ್ಮ ಜೀವನದ ಹೊಸ ಆರಂಭ. ನಾವು ಇದೇ ರೀತಿ ಪಾಸಿಟಿವ್ ಆಗಿ ಇರೋಣ. ಬಂಗಾರದ ಭವಿಷ್ಯದೆಡೆಗೆ ಹೆಜ್ಜೆ ಇಡೋಣ. ನಮಗೆ ನಿಮ್ಮೆಲ್ಲರ ಆಶೀರ್ವಾದ ಬೇಕು' ಎಂದು ವಿಷ್ಣು ವಿಶಾಲ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲ, 'ಅರ್ಧರಾತ್ರಿಯಲ್ಲೂ ನಮಗೆ ಉಂಗುರ ತಂದುಕೊಟ್ಟು ಸಹಾಯ ಮಾಡಿದ ಜ್ವಾಲಾ ಮ್ಯಾನೇಜರ್ ಬಸಂತ್ ಜೈನ್ ಅವರಿಗೂ ಧನ್ಯವಾದಗಳು' ಎಂದು ವಿಷ್ಣು ವಿಶಾಲ್ ಪೋಸ್ಟ್ನಲ್ಲಿ ಬರೆದಿದ್ದಾರೆ.
ಈ ಪೋಸ್ಟ್ಗೆ ಅಭಿಮಾನಿಗಳು ಕಮೆಂಟ್ ಮಾಡಿ ಇಬ್ಬರಿಗೂ ಶುಭ ಕೋರಿದ್ದಾರೆ. ಆದರೆ ಇದು ಇಬ್ಬರಿಗೂ ಎರಡನೇ ಮದುವೆ. 2005 ರಲ್ಲಿ ಜ್ವಾಲಾ ಗುಟ್ಟಾ ಬ್ಯಾಡ್ಮಿಂಟನ್ ಆಟಗಾರ ಚೇತನ್ ಆನಂದ್ ಅವರ ಕೈ ಹಿಡಿದಿದ್ದರು. ಆದರೆ 6 ವರ್ಷಗಳ ನಂತರ ಇಬ್ಬರೂ ವಿಚ್ಛೇದನ ಪಡೆದು ದೂರವಾದರು. ವಿಷ್ಣು ವಿಶಾಲ್ ಕೂಡಾ 2011 ರಲ್ಲಿ ಫ್ಯಾಷನ್ ಡಿಸೈನರ್ ರಜನಿ ನಟರಾಜ್ ಎಂಬುವವರನ್ನು ಮದುವೆಯಾಗಿದ್ದರು. ಆದರೆ ಕಾರಣಾಂತರಗಳಿಂದ ಇವರ ಸಂಬಂಧ 2018 ರಲ್ಲಿ ಮುರಿದುಬಿತ್ತು. ಇದೀಗ ಇಬ್ಬರೂ ಮರು ಮದುವೆಯಾಗಲು ಹೊರಟಿದ್ದಾರೆ.