ಆರ್. ಚಂದ್ರು ನಿರ್ದೇಶನದಲ್ಲಿ ಉಪೇಂದ್ರ ಹಾಗೂ ರಚಿತಾ ರಾಮ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಐ ಲವ್ ಯು' ಸಿನಿಮಾ ಇನ್ನು ನಾಲ್ಕೈದು ದಿನಗಳಲ್ಲಿ 50 ದಿನಗಳನ್ನು ಪೂರೈಸಲಿದೆ. ಜೂನ್ 14 ರಂದು ಈ ಸಿನಿಮಾ ಬಿಡುಗಡೆಯಾಗಿತ್ತು.
'ಐ ಲವ್ ಯು' ಸಿನಿಮಾದ ರೊಮ್ಯಾಂಟಿಕ್ ವಿಡಿಯೋ ಸಾಂಗ್ ಬಿಡುಗಡೆ - undefined
ಕಾಂಟ್ರವರ್ಸಿ ಹುಟ್ಟುಹಾಕಿದ್ದ 'ಐ ಲವ್ ಯು' ಸಿನಿಮಾದ 'ಮಾತನಾಡಿ ಮಾಯವಾದೆ' ರೊಮ್ಯಾಂಟಿಕ್ ವಿಡಿಯೋ ಸಾಂಗ್ ಬಿಡುಗಡೆಯಾಗಿದೆ. ಚಿತ್ರ ಇನ್ನು ನಾಲ್ಕೈದು ದಿನಗಳಲ್ಲಿ ಅರ್ಧಶತಕ ಪೂರೈಸಲಿದೆ.
ಇನ್ನು ಸಿನಿಮಾ ಬಿಡುಗಡೆಯಾಗುತ್ತಿದ್ದಂತೆ ಚಿತ್ರದ ಹಾಡೊಂದರ ಬಗ್ಗೆ ರಚಿತಾ ರಾಮ್ ನೀಡಿದ್ದ ಹೇಳಿಕೆ ಉಪೇಂದ್ರ, ಪ್ರಿಯಾಂಕ ಹಾಗೂ ಮತ್ತೆ ಕೆಲವರ ಬೇಸರಕ್ಕೆ ಕಾರಣವಾಗಿತ್ತು. ಕೆಲವು ದಿನಗಳವರೆಗೂ ಈ ವಿಷಯದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇತ್ತು. ಇನ್ನೆಂದಿಗೂ ನಾನು ಇಂತಹ ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ಕೂಡಾ ರಚಿತಾ ರಾಮ್ ಹೇಳಿಕೆ ಕೂಡಾ ನೀಡಿದ್ದಾರೆ. ಇದೀಗ 'ಮಾತನಾಡಿ ಮಾಯವಾದೆ' ಎಂಬ ಈ ರೊಮ್ಯಾಂಟಿಕ್ ವಿಡಿಯೋ ಸಾಂಗನ್ನು ಚಿತ್ರತಂಡ ಬಿಡುಗಡೆಯಾಗಿದೆ.
ಅರ್ಮಾನ್ ಮಲ್ಲಿಕ್ ಹಾಡಿರುವ ಈ ಹಾಡಿನ ಸಾಹಿತ್ಯವನ್ನು ಸಂತೋಷ್ ನಾಯಕ್ ಬರೆದಿದ್ದಾರೆ. ಕಿರಣ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಬ್ಯಾನರ್ ಅಡಿ ತಯಾರಾದ ಸಿನಿಮಾವನ್ನು ಆರ್. ಚಂದ್ರು ನಿರ್ದೇಶಿಸಿ ನಿರ್ಮಿಸಿದ್ದಾರೆ. ಉಪೇಂದ್ರ, ರಚಿತಾ ರಾಮ್ ಜೊತೆ ಸೋನುಗೌಡ, ತೆಲುಗು ನಟ ಬ್ರಹ್ಮಾನಂದಂ, ಹೊನ್ನವಳ್ಳಿ ಕೃಷ್ಣ, ಜೈ ಜಗದೀಶ್ ಹಾಗೂ ಇನ್ನಿತರರು ನಟಿಸಿದ್ದಾರೆ. ಚಿತ್ರ ತೆಲುಗು ಹಾಗು ಕನ್ನಡ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಿತ್ತು.