ತೆಲುಗು ಕುಟುಂಬದಲ್ಲಿ ಜನಿಸಿ ಟಾಲಿವುಡ್ ಜೊತೆಗೆ ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿ ಹೆಸರು ಮಾಡಿರುವ ಮುದ್ದು ನಟಿ ರೋಜಾ ಬಹುಶ: ಎಲ್ಲರಿಗೂ ಗೊತ್ತು. 'ಗಡಿಬಿಡಿ ಗಂಡ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು ರವಿಚಂದ್ರನ್ ಜೊತೆ ರೊಮ್ಯಾನ್ಸ್ ಮಾಡಿದ ರೋಜಾ ಈಗ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಎಂಎಲ್ಎ ಆಗಿ ಗುರುತಿಸಿಕೊಂಡಿದ್ದಾರೆ.
ಕಳೆದ 4 ದಿನಗಳ ಹಿಂದೆ ರೋಜಾ ತಮ್ಮ ಪುತ್ರಿ ಅನ್ಷುಮಾಲಿಕ 17ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಈ ಫೋಟೋಗಳು ಈಗ ಸಖತ್ ವೈರಲ್ ಆಗುತ್ತಿದೆ. 2002 ರಲ್ಲಿ ತಮಿಳು ನಿರ್ದೇಶಕ ಸೆಲ್ವಮಣಿ ಅವರನ್ನು ಕೈ ಹಿಡಿದ ರೋಜಾಗೆ ಇಬ್ಬರು ಮಕ್ಕಳು. ಮಗಳು ಅನ್ಷುಮಾಲಿಕ ಹಾಗೂ ಮಗ ಕೃಷ್ಣ ಲೋಹಿತ್. ಅನ್ಷುಮಾಲಿಕ 17ನೇ ವರ್ಷದ ಬರ್ತ್ಡೇ ಕಾರ್ಯಕ್ರಮದಲ್ಲಿ ಕುಟುಂಬದ ಸದಸ್ಯರು ಮಾತ್ರ ಹಾಜರಾಗಿದ್ದರೂ ಹುಟ್ಟುಹಬ್ಬ ಮಾತ್ರ ಬಹಳ ಅದ್ಧೂರಿಯಾಗಿತ್ತು.