ಕರ್ನಾಟಕ

karnataka

ETV Bharat / sitara

ಬೆಳದಿಂಗಳ ಬಾಲೆ‌ ಸುಮನ್ ನಗರ್ಕರ್​ರ ಚಿತ್ರಕ್ಕೆ ಆಭಯ ಹಸ್ತ ನೀಡಿದ ರಾಕಿ ಭಾಯ್​! - ಬೆಳದಿಂಗಳ ಬಾಲೆ ಸುಮನ್ ನಗರ್ಕರ್

ಬಬ್ರೂ ಅಂತಾ ವಿಭಿನ್ನ ಶೀರ್ಷಿಕೆ ಇಟ್ಟು ಸುಮನ್ ನಗರ್ಕರ್, ಆಕ್ಟಿಂಗ್ ಜೊತೆ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಟ್ರೈಲರ್​​ನನ್ನ ರಾಕಿಂಗ್ ಸ್ಟಾರ್ ಯಶ್ ರಿಲೀಸ್ ಮಾಡಿದ್ರು.

ಸಮನ್ ನಗರ್ಕರ್ ಚಿತ್ರಕ್ಕೆ ರಾಕಿಬಾಯ್ ಆಭಯ ಹಸ್ತ

By

Published : Oct 19, 2019, 6:11 AM IST

Updated : Oct 19, 2019, 8:18 AM IST

ಸುಮನ್ ನಗರ್ಕರ್ ಎಂದ ಕೂಡಲೇ ಕನ್ನಡ ಸಿನಿ ಪ್ರೇಮಿಗಳಿಗೆ ಥಟ್ ಅಂತ ನೆನಪಾಗುವುದು ಬೆಳದಿಂಗಳ ಬಾಲೆ ಸಿನಿಮಾ. ಆ ಬೆಳದಿಂಗಳ ಬಾಲೆ ಸುಮನ್ ನಗರ್ಕರ್ ಒಂದು ದಶಕದ ನಂತ್ರ, ಮತ್ತೆ ಸ್ಯಾಂಡಲ್ ವುಡ್​​ಗೆ ರೀ ಎಂಟ್ರಿ ಕೊಟ್ಟಿದ್ದಾರೆ.

ಬಬ್ರೂ ಅಂತಾ ವಿಭಿನ್ನ ಶೀರ್ಷಿಕೆ ಇಟ್ಟು ಸುಮನ್ ನಗರ್ಕರ್, ಆಕ್ಟಿಂಗ್ ಜೊತೆ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಟ್ರೈಲರ್ ರಾಕಿಂಗ್ ಸ್ಟಾರ್ ಯಶ್ ರಿಲೀಸ್ ಮಾಡಿ, ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನ ಆಡಿದ್ರು.

ಬಳಿಕ ಮಾತನಾಡಿದ ಸುಮನ್​ ನಗರ್ಕರ್,​​ ಅಮೆರಿಕಾದಿಂದ ಬಂದು ಕನ್ನಡದಲ್ಲಿ ಸಿನಿಮಾ ಮಾಡ್ತಾ ಇರೋದು ಖುಷಿಯ ವಿಚಾರ. ​​​ಹಾಗೆ ನಾವು ಕನ್ನಡಿಗರು ಅಂತಾ ಅಮೆರಿಕಾದಲ್ಲಿರುವ ಕೆಲವು ಜನ ಕನ್ನಡ ಸಿನಿಮಾ ಮಾಡೋದಿಕ್ಕೆ ಹಣ ಕೇಳ್ತಾರೆ. ಇಂತಹ ಸಂಸ್ಕೃತಿ ಹೋಗಬೇಕು. ಕನ್ನಡ ಚಿತ್ರಗಳು ಅಮೆರಿಕಾದಲ್ಲಿ ಹೆಚ್ಚು ಪ್ರದರ್ಶನಗೊಂಡಾಗ ಮತ್ತಷ್ಟು ಒಳ್ಳೆ ಸಿನಿಮಾಗಳು ಬರುತ್ತೆ ಎಂದರು.

ಸಮನ್ ನಗರ್ಕರ್ ಚಿತ್ರಕ್ಕೆ ರಾಕಿ ಭಾಯ್ ಆಭಯ ಹಸ್ತ

ಕನ್ನಡಿಗರ ಹೆಸರಲ್ಲಿ ಅಮೆರಿಕಾದಲ್ಲಿ ಹಣ ಸುಲಿಗೆ ಮಾಡ್ತಾ ಇರುವವರಿಗೆ ಯಶ್ ಕಿವಿಮಾತು ಹೇಳಿದ್ರು. ಡಾ. ರಾಜ್ ಕುಮಾರ್ ಬಬ್ರುವಾಹನ ಚಿತ್ರದ ಸ್ಫೂರ್ತಿಯಿಂದ ಈ ಟೈಟಲ್ ಇಡಲಾಗಿದೆ ಅಂತಾ ಸುಮನ್ ನಗರ್ಕರ್ ಹೇಳಿದ್ರು. ಬಬ್ರೂ ಅಂದ್ರೆ ಕಾರು. ಈ ಕಾರಿನ‌ ಜರ್ನಿಯಲ್ಲಿ ನಡೆಯುವ ಕಥೆಯೇ ಈ ಚಿತ್ರ ಸ್ಟೋರಿ ಲೈನ್. ಸುಮನ್ ನಗರ್ಕರ್ ಗಂಡನ ದೌರ್ಜನ್ಯಕ್ಕೆ ಒಳಗಾಗಿರುವ ಹೆಂಗಸಿನ ಪಾತ್ರ ಮಾಡಿದ್ದಾರೆ.

ಇನ್ನು ಅಮೆರಿಕಾದಲ್ಲಿ ಡ್ಯಾನ್ಸ್ ಹೇಳಿ ಕೊಡುವ ಮಾಹಿ ಹಿರೇಮಠ, ಜಾಬ್ ಲೇಸ್ ಹುಡ್ಗನ ಕ್ಯಾರೆಕ್ಟರ್ ಪ್ಲೇ ಮಾಡಿದ್ದಾರೆ. ಹಾಗೆ ಘನ್ ಭಟ್, ಸನ್ನಿ ಮೋಜ, ಪ್ರಕೃತಿ ಕಶ್ಯಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯ ರಿವೀಲ್ ಆಗಿರೋ ಬಬ್ರೂ ಟ್ರೈಲರ್​ನಲ್ಲಿ ಸಸ್ಪೆನ್ಸ್ ಹಾಗು ಥ್ರಿಲ್ಲರ್ ನಿಂದ ಕೂಡಿದೆ. ಅಭಿಲಾಷ್ ನಾರಾಯಣ್ ಕ್ಯಾಮರಾ ವರ್ಕ್ ಅದ್ಭುತವಾಗಿ ಮೂಡಿಬಂದಿದೆ. ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಸಾಕಷ್ಟು ಶಾರ್ಟ್ ಸಿನಿಮಾ ಮಾಡಿರೋ ಸುಜಯ್ ರಾಮಯ್ಯ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರ ಸಂಪೂರ್ಣವಾಗಿ ಅಮೆರಿಕಾದಲ್ಲಿ ಚಿತ್ರೀಕರಣ ಮಾಡಿರೋ ಮೊಟ್ಟಮೊದಲ ಕನ್ನಡ ಸಿನಿಮಾ ಇದಾಗಿದೆ.

Last Updated : Oct 19, 2019, 8:18 AM IST

ABOUT THE AUTHOR

...view details