ಕರ್ನಾಟಕ

karnataka

ETV Bharat / sitara

ರಾಕಿಂಗ್​​ ಸ್ಟಾರ್​​ ಯಶ್ ಗೆ ಊಟ ಮಾಡಿಸಿದ ಆ 'ಪುಟ್ಟ ಪುಟ್ಟ ಕೈ'! - ಯಶ್​​ ಮಗಳು ಐರಾ ಯಶ್​​

ರಾಕಿಂಗ್ ಸ್ಟಾರ್​​ ಯಶ್ ಗೆ ಮುದ್ದಿನ ಮಗಳು ಐರಾ ಊಟ ಮಾಡಿಸಿದ್ದು , ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.​​

rocking star yash yash with his daughter Ayra
ಯಶ್​ಗೆ ಮಗಳಿಂದ ಕೈ ತುತ್ತು

By

Published : Mar 24, 2020, 11:08 AM IST

ಬೆಂಗಳೂರು: ಕೊರೊನಾ ಎಂಬ ಮಹಾಮಾರಿಗೆ ಇಡೀ ವಿಶ್ವವೇ ನಡುಗಿ ಹೋಗಿದೆ. ಈ ಕೊರೊನಾ ಭೀತಿಗೆ ಇಡೀ ಸ್ಯಾಂಡಲ್ ವುಡ್ ಹಾಗು ಸಿನಿಮಾ ಸೆಲೆಬ್ರಿಟಿಗಳು ಸರ್ಕಾರದ ಆಜ್ಞೆ ಪಾಲಿಸುತ್ತಿದ್ದಾರೆ.. ಕೆಲ ತಾರೆಯರು ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ.

ಯಶ್​ಗೆ ಮಗಳಿಂದ ಕೈ ತುತ್ತು

ಕೆಜಿಎಫ್ ಸಿನಿಮಾ ಮೂಲಕ ವಿಶ್ವಾದ್ಯಂತ ಗಮನ‌ ಸೆಳೆದ ರಾಕಿಂಗ್ ಸ್ಟಾರ್ ಯಶ್ ಗೆ ವಿಶೇಷ ಅತಿಥಿಯೊಬ್ಬರು ಊಟ ಮಾಡಿಸಿದ್ದಾರೆ.. ಬಹುಶಃ ಇದುವರೆಗೂ ಯಶ್ ಗೆ ಅಮ್ಮ ಹಾಗು ಪತ್ನಿ ರಾಧಿಕಾ ಪಂಡಿತ್ ಊಟ ಮಾಡಿಸಿರಬಹುದು.. ಇದೀಗ ಇವರಿಗೆ ಸ್ಪರ್ಧೆ ನೀಡಲು ಮತ್ತೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಅಷ್ಟಕ್ಕೂ ಯಶ್ ಗೆ ಊಟ ಮಾಡಿಸಿದ ಆ ಸ್ಪೆಷಲ್ ಅತಿಥಿ ಯಾರು ಅಂದುಕೊಂಡ್ರಾ, ಅವರೇ ಯಶ್ ಮುದ್ದಿನ ಮಗಳು ಐರಾ.

ಯಶ್ ಕೆಜಿಎಫ್ ಸಿನಿಮಾ ಶೂಟಿಂಗ್ ಬಿಡುವು ಮಾಡಿಕೊಂಡು ಮನೆಯಲ್ಲಿ ಮಗಳು ಐರಾ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ..ಯಶ್ ಮಗಳಿಗೆ ಊಟ ಮಾಡಿಸೋದಿಕ್ಕೆ ಹೋಗಿ, ಮಗಳಿಂದ ಕೈ ತುತ್ತು ತಿಂದಿದ್ದಾರೆ. ಅಪ್ಪ ಮಗಳ ಬಾಂಧವ್ಯದ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ABOUT THE AUTHOR

...view details