ಕರ್ನಾಟಕ

karnataka

ETV Bharat / sitara

ರಾಧಿಕಾ ಪಂಡಿತ್ 'ಆರ್' ಅಕ್ಷರದ ಸೀಕ್ರೆಟ್ ಬಿಚ್ಚಿಟ್ಟ ರಾಕಿಂಗ್ ಸ್ಟಾರ್ - undefined

ರಾಧಿಕಾ ಪಂಡಿತ್ ಅವರ 'ಆರ್‌' ಅಕ್ಷರದ ಪೋಸ್ಟ್ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯಿಸಿದ್ದಾರೆ. ಮಗಳಿಗೆ ಇನ್ನೂ ಯಾವ ಹೆಸರಿಡಬೇಕೆಂದು ತೀರ್ಮಾನಿಸಿಲ್ಲ. ಆದಷ್ಟು ಬೇಗ ಸಂಪ್ರದಾಯಬದ್ಧವಾಗಿ ನಾಮಕರಣ ಮಾಡುವುದಾಗಿ ಹೇಳಿದ್ದಾರೆ.

ರಾಧಿಕಾ ಪಂಡಿತ್

By

Published : Mar 20, 2019, 3:20 PM IST

ಕಳೆದ ಎರಡು ದಿನಗಳ ಹಿಂದೆ ಫೇಸ್​​​ಬುಕ್​​​​ನಲ್ಲಿ ನಟಿ ರಾಧಿಕಾ ಪಂಡಿತ್ ಒಂದು ಪೋಸ್ಟ್ ಹಾಕಿದ್ದರು. ಕೈಯಲ್ಲಿ 'ಆರ್‌' ಅಕ್ಷರದ ವಸ್ತುವೊಂದನ್ನು ಹಿಡಿದು 'R Stand for.... ಎಂದು ತಮ್ಮ ಫೇಸ್​ಬುಕ್ ಫೇಜ್​​​​​​​ನಲ್ಲಿ ಆ ಫೋಟೋ ಹಾಕಿಕೊಂಡಿದ್ದರು.

ರಾಕಿಂಗ್ ಸ್ಟಾರ್ ಯಶ್

ಈ ಪೋಸ್ಟ್ ನೋಡಿದ ಯಶ್ ಮತ್ತು ರಾಧಿಕಾ ಪಂಡಿತ್ ಅಭಿಮಾನಿಗಳು, ಮಗಳಿಗೆ ಆರ್ ಅಕ್ಷರದಿಂದ ಹೆಸರಿಡಲು ನಿರ್ಧರಿಸಿರಬಹುದು. ಅದಕ್ಕೆ ಆರ್ ಎಂದು ಸುಳಿವು ಕೊಡ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಈ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯಿಸಿದ್ದಾರೆ. ನೀವು ಅಂದುಕೊಂಡಂತೆ ಏನೂ ಇಲ್ಲ. ರಾಧಿಕಾ ಮತ್ತು ರಾಕಿಂಗ್ ಸ್ಟಾರ್ ಅಂತಹ ಹೆಸರಿರಬೇಕು ಅಂತ ಪೋಸ್ಟ್ ಹಾಕಿದ್ದಾರೆ ಅಷ್ಟೇ. ಮಗಳಿಗೆ ಇನ್ನು ಯಾವುದು ಹೆಸರು ಅಂತಿಮ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಅಭಿಮಾನಿಗಳೇ ಮಗಳಿಗೆ ಹಲವು ಹೆಸರುಗಳನ್ನು ಸೂಚಿಸುತ್ತಿರುವುದು ನಿಜಕ್ಕೂ ಖುಷಿ ಕೊಟ್ಟಿದೆ. ಸದ್ಯದಲ್ಲೇ ಸಂಪ್ರದಾಯಬದ್ಧವಾಗಿ ನಾಮಕರಣ ಮಾಡಿ ಒಂದು ಹೆಸರಿಡುತ್ತೇವೆ. ಆಮೇಲೆ ಬೇಕಾದರೆ ನಮಗೆ ಇಷ್ಟ ಬಂದಂತೆ ಕರೆಯೋಣ ಎಂದು ಯಶ್ 'ಪಂಚತಂತ್ರ' ಸಿನಿಮಾ ಟ್ರೇಲರ್ ಲಾಂಚ್ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details