ಕೊನೆಗೂ ಯಶ್ ಅಭಿಮಾನಿಗಳ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ರಾಕಿಂಗ್ ಸ್ಟಾರ್ ಯಶ್-ರಾಧಿಕಾ ಪಂಡಿತ್ ಮುದ್ದು ಮಗಳ ಫೋಟೋ ರಿವೀಲ್ ಆಗಿದೆ.
Waiting is over ... ಯಶ್-ರಾಧಿಕಾ ಪುತ್ರಿಯ ಫಸ್ಟ್ ಲುಕ್ ರಿಲೀಸ್ - ಫಸ್ಟ್ ಲುಕ್ ರಿಲೀಸ್
ಇವಳು ಬಂದಾಗಲಿಂದ ಬರೀ ಇವಳದ್ದೇ ಹವಾ. ಇನ್ನೂ ಮಗುವಿಗೆ ಹೆಸರು ಫಿಕ್ಸ್ ಮಾಡಿಲ್ಲ. ಸದ್ಯಕ್ಕೆ Baby YR ಅಂತಾನೇ ಕರೆಯೋಣ..
ರಾಕಿಭಾಯ್ಗೆ ಪುತ್ರಿಯ ಮೊಗವ ನೋಡಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ತಮ್ಮಷ್ಟಕ್ಕೆ ತಾವೇ ಮಗುವಿಗೆ ಹೆಸರುಗಳನ್ನಿಟ್ಟುಕೊಂಡು ಸಂಭ್ರಮಿಸುತ್ತಿದ್ದರು. ಇದೀಗ ಯಶ್ ದಂಪತಿ ತಮ್ಮ ಫೇಸ್ಬುಕ್ಗಳಲ್ಲಿ ತಮ್ಮ ಲಿಟ್ಲ್ ಪ್ರಿನ್ಸ್ ಫಸ್ಟ್ ಫೋಟೋ ಹಂಚಿಕೊಂಡಿದ್ದಾರೆ.
ಅಕ್ಷಯ ತೃತೀಯ ದಿನವಾದ ಇಂದು ಮಗುವಿನ ಫೋಟೋ ಅಭಿಮಾನಿಗಳಿಗೆ ಪರಿಚಯಿಸಿರುವ ಯಶ್, 'ನೀವು ಹೇಳಿದ್ದೇ ಸರಿ, ಇವಳು ಬರೋವರ್ಗು ಮಾತ್ರ ನನ್ನ ಹವಾ.. ಇವಳು ಬಂದಾದ ಮೇಲೆ ಬರೀ ಇವಳದ್ದೇ ಹವಾ. ಇನ್ನೂ ಮಗುವಿಗೆ ಹೆಸರು ಫಿಕ್ಸ್ ಮಾಡಿಲ್ಲ. ಸದ್ಯಕ್ಕೆ Baby YR ಅಂತಾನೇ ಕರೆಯೋಣ.. ಎಂದಿನಂತೆ ನಿಮ್ಮ ಆಶೀರ್ವಾದ ಇವಳ ಮೇಲೂ ಇರಲಿ ಎಂದಿದ್ದಾರೆ.