ಕರ್ನಾಟಕ

karnataka

ETV Bharat / sitara

ರಾಕಿಂಗ್ ಸ್ಟಾರ್ ಯಶ್​ 19ನೇ ಸಿನಿಮಾ‌ಕ್ಕೆ ಇವರೇನಾ ಡೈರೆಕ್ಟರ್? - Yash 19th movie director

'ಕೆಜಿಎಫ್ ಚಾಪ್ಟರ್ 2’ ಸಿನಿಮಾ ತೆರೆಕಂಡ ನಂತರ ​ನಿರ್ದೇಶಕ ನರ್ತನ್ ​ಜತೆ ಯಶ್ ಕೈ ಜೋಡಿಸಲಿದ್ದಾರೆ ಎಂಬ ಸುದ್ದಿ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

yash
yash

By

Published : Oct 21, 2021, 6:42 AM IST

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವ ನಟ‌ ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಕೆಜಿಎಫ್ ಚಾಪ್ಟರ್-2 ಸಿನಿಮಾದ ಹ್ಯಾಂಗೋವರ್​ನಲ್ಲಿದ್ದಾರೆ. ಇದೀಗ ಅವರ​ 19ನೇ ಸಿನಿಮಾದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದು, ಯಶ್ ಜತೆ ಸಿನಿಮಾ ಮಾಡಬೇಕೆಂದು ಸ್ಟಾರ್​ ಡೈರೆಕ್ಟರ್​ಗಳು ಕಾದು ಕೂತಿದ್ದಾರೆ ಎನ್ನಲಾಗಿದೆ.

ಹೌದು, ಕೆಜಿಎಫ್ ಚಾಪ್ಟರ್ 2 ದೊಡ್ಡ ಮಟ್ಟದ ಯಶಸ್ಸು ಕಂಡರೆ ಬಹುಶಃ ನಟ ಯಶ್​ ಸೌತ್ ಸಿನಿಮಾ‌ ಇಂಡಸ್ಟ್ರಿ, ಸ್ಟಾರ್ ಡೈರೆಕ್ಟರ್​ ಜೊತೆಗೆ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಯಡಿ ಸಿನಿಮಾ ಮಾಡ್ತಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ಕನ್ನಡದ ನಿರ್ದೇಶಕರೋರ್ವರ ಜೊತೆಗೆ ಸಹ ಸಿನಿಮಾ ಮಾಡೋದು ಪಕ್ಕಾ ಎನ್ನಲಾಗಿದೆ. ಅಷ್ಟಕ್ಕೂ ಯಾರು ಆ ನಿರ್ದೇಶಕ ಅಂತೀರಾ?, ಅವರೇ 'ಮಫ್ತಿ' ಸಿನಿಮಾ ನಿರ್ದೇಶಕ ನರ್ತನ್.

ನಿರ್ದೇಶಕ ನರ್ತನ್

ನಟ​ ಯಶ್ ಅವರು ನಿರ್ದೇಶಕ ನರ್ತನ್ ಜೊತೆ 19ನೇ ಸಿನಿಮಾ ಮಾಡುವುದು ಖಚಿತ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ. ಈ ಮಾತಿಗೆ ಪೂರಕವಾಗಿ ನಿರ್ದೇಶಕ ನರ್ತನ್​ ಹೆಸರಿನಲ್ಲಿ ನಕಲಿ​ ಟ್ವಿಟರ್​ ಖಾತೆ ಕ್ರಿಯೇಟ್​ ಮಾಡಿರುವ ವ್ಯಕ್ತಿಯೊಬ್ಬರು ಈ ಕುರಿತು ಟ್ವೀಟ್​ ಮಾಡಿದ್ದಾರೆ. ಈ ಟ್ವೀಟ್​ನಲ್ಲಿ ಯಶ್​ 19ನೇ ಸಿನಿಮಾದ ಕುರಿತು ನವೆಂಬರ್​ 4 ರಂದು ಘೋಷಣೆ ಮಾಡುತ್ತೇವೆ. ಹೊಂಬಾಳೆ ಫಿಲಂಸ್​​ ಇದಕ್ಕೆ ಬಂಡವಾಳ ಹೂಡುತ್ತಿದೆ ಎಂದು ಬರೆದುಕೊಳ್ಳಲಾಗಿದೆ.

ಯಶ್​ 19ನೇ ಸಿನಿಮಾದ ಕುರಿತು ಟ್ವೀಟ್​

ಕೆಜಿಎಫ್​‌ ಚಾಪ್ಟರ್​ 2 ಬಿಡುಗಡೆ:

ಕೆಜಿಎಫ್ ಚಾಪ್ಟರ್ 2 ಸಿನಿಮಾ ಯಾವಾಗ ರಿಲೀಸ್​ ಆಗಲಿದೆ ಎಂಬುದಕ್ಕೆ ಇತ್ತೀಚೆಗಷ್ಟೇ ಉತ್ತರ ಸಿಕ್ಕಿದೆ. 2022 ರ ಏಪ್ರಿಲ್​ 14ರಂದು ಚಿತ್ರ ಬಿಡುಗಡೆ ಆಗಲಿದೆ ಅಂತಾ ಚಿತ್ರತಂಡ ಅಧಿಕೃತವಾಗಿ ಅನೌಂಸ್ ಮಾಡಿದೆ. ಈ ಸಿನಿಮಾ ತೆರೆ ಕಂಡ ಬಳಿಕ ಯಶ್ ಜೊತೆ ಯಾವ ನಿರ್ದೇಶಕರು ಹಾಗು ಯಾವ ನಿರ್ಮಾಣ ಸಂಸ್ಥೆಯಡಿ ಮುಂದಿನ ಸಿನಿಮಾ ಮಾಡುತ್ತಾರೆ ಎನ್ನುವುದು ಗೊತ್ತಾಗಲಿದೆ.

ABOUT THE AUTHOR

...view details