ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್. ಬಣ್ಣದ ಲೋಕದಿಂದ ಕರಿಯರ್ ಆರಂಭಿಸಿದಾಗಿನಿಂದ ಸ್ಟಾರ್ಗಳಾಗುವವರೆಗೂ ಜೊತೆಗಿದ್ದ ಜೋಡಿ ಹಿರಿಯರ ಒಪ್ಪಿಗೆ ಪಡೆದು ಮದುವೆಯಾದರು. ದಂಪತಿಗೆ ಐರಾ ಎಂಬ ಮುದ್ದು ಮಗುವಿದ್ದು, ಇದೀಗ ರಾಧಿಕಾ ಶೀಘ್ರದಲ್ಲೇ ಎರಡನೇ ಮಗುವಿಗೆ ತಾಯಿಯಾಗಲಿದ್ದಾರೆ.
ಫೋಟೋ ನೋಡಿ ಇವರೇ ಅಪ್ಪ-ಅಮ್ಮ ಎಂದು ಕಂಡು ಹಿಡಿದ ರಾಕಿಂಗ್ ಸ್ಟಾರ್ ಪುತ್ರಿ ಐರಾ..!
ಐರಾ 8 ತಿಂಗಳ ಮಗುವಾಗಿದ್ದಾಗ ತೆಗೆದ ವಿಡಿಯೋವೊಂದನ್ನು ರಾಧಿಕಾ ಪಂಡಿತ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಐರಾ, ಯಶ್-ರಾಧಿಕಾ ಪೋಟೋ ನೋಡಿ ಇವರೇ ಅಪ್ಪ-ಅಮ್ಮ ಎಂದು ಕಂಡುಹಿಡಿದಿದ್ದಾಳೆ.
ಸದ್ಯಕ್ಕೆ ಯಶ್-ರಾಧಿಕಾ ಪುತ್ರಿ ಐರಾ, ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿಯಂತೆಯೇ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದ್ದಾಳೆ. ಯಶ್ ಹಾಗೂ ರಾಧಿಕಾ ಇಬ್ಬರೂ ತಮ್ಮ ಪುತ್ರಿಯ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಐರಾಗೆ ಈಗ 10 ತಿಂಗಳು ತುಂಬಿದ್ದು, ಮಗು 8 ತಿಂಗಳು ಇದ್ದಾಗ ತೆಗೆದ ವಿಡಿಯೋವೊಂದನ್ನು ರಾಧಿಕಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಧಿಕಾ ತಾಯಿ ಕೊಂಕಣಿ ಭಾಷೆಯಲ್ಲಿ ಐರಾಳನ್ನು ಮಾತನಾಡಿಸಿ ಯಶ್, ರಾಧಿಕಾ ಫೋಟೋ ತೋರಿಸಿ ಅಪ್ಪ, ಅಪ್ಪ ಎಲ್ಲಿ ಎಂದು ಕೇಳುತ್ತಾರೆ. ಅಜ್ಜಿಯ ಮಾತನ್ನು ಅರ್ಥ ಮಾಡಿಕೊಂಡ ಐರಾ, ಯಶ್ ಹಾಗೂ ರಾಧಿಕಾರನ್ನು ಫೋಟೋದಲ್ಲಿ ತೋರಿಸುತ್ತಾಳೆ. ಈ ಮುದ್ದಾದ ವಿಡಿಯೋವನ್ನು ರಾಧಿಕಾ ತಮ್ಮ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಯಶ್ ಹಾಗೂ ರಾಧಿಕಾ ಅಭಿಮಾನಿಗಳು ಈ ವಿಡಿಯೋವನ್ನು ಬಹಳ ಇಷ್ಟಪಟ್ಟಿದ್ದಾರೆ.