ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ‘ರಾಬರ್ಟ್’ ಸಿನಿಮಾ ಬಗ್ಗೆ ಇತ್ತೀಚೆಗೆ ಭಾರಿ ಚರ್ಚೆಯಾಗಿತ್ತು. ತೆಲುಗಿನಲ್ಲಿ ರಾಬರ್ಟ್ ರಿಲೀಸ್ಗೆ ಗೊಣಗಾಡಿದವರ ಮೇಲೆ ದರ್ಶನ್ ಫಿಲ್ಮ್ ಚೇಂಬರ್ಗೆ ದೂರು ನೀಡಿದ್ದೂ ಆಗಿ ಕೊನೆಗೆ ಯಶಸ್ಸು ಸಿಕ್ಕಿದೆ. ಇದೇಗ ಮಾರ್ಚ್ 11ಕ್ಕೆ ತೆಲುಗಿನಲ್ಲಿಯೂ ರಾಬರ್ಟ್ ಅಬ್ಬರಿಸಲಿದ್ದಾನೆ.
ರಾಬರ್ಟ್ ತೆಲುಗು ಟೀಸರ್ ಔಟ್... ಅಭಿಮಾನಿಗಳು ದಿಲ್ ಖುಷ್ - ತೆಲುಗಿನಲ್ಲಿ ರಾಬರ್ಟ್ ಟೀಸರ್
ಇಂದು ತೆಲುಗು ಅವತರಣಿಕೆಯ ರಾಬರ್ಟ್ ಟೀಸರ್ ತೆರೆ ಕಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಗಿದೆ.

ರಾಬರ್ಟ್ ತೆಲುಗು ಟೀಸರ್ ಔಟ್
ಇದೇ ಹಿನ್ನೆಲೆಯಲ್ಲಿ ಇಂದು ತೆಲುಗು ಅವತರಣಿಕೆಯ ರಾಬರ್ಟ್ ಟೀಸರ್ ತೆರೆ ಕಂಡಿದ್ದು, ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಗಿದೆ.
ಇಂದು ತೆರೆ ಕಂಡಿರುವ ರಾಬರ್ಟ್ ಟೀಸರ್ನಲ್ಲಿ ದರ್ಶನ್ ಧ್ವನಿಯೇ ಇಲ್ಲ. ಟೀಸರ್ನಲ್ಲಿ ಚಾಲೆಂಜಿಂಗ್ ಸ್ಟಾರ್ಗೆ ಬೇರೆಯವರಿಂದ ವಾಯ್ಸ್ ಡಬ್ ಮಾಡಿಸಲಾಗಿದೆ. ದರ್ಶನ್ ಬಾಯಿಂದ ತೆಲುಗು ಭಾಷೆ ಕೇಳಬೇಕೆಂದಿದ್ದ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ. ಅದನ್ನು ಫ್ಯಾನ್ಸ್ ಕಮೆಂಟ್ ಮಾಡುವ ಮೂಲಕ ಬೇಸರ ವ್ಯಕ್ತ ಪಡಿಸ್ತಿದ್ದಾರೆ.