ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ತರುಣ್ ಸುಧೀರ್ ನಿರ್ದೇಶನದ ರಾಬರ್ಟ್ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ. ಈ ಸುದ್ದಿಯನ್ನು ಚಿತ್ರತಂಡ ಈಗಾಗಲೇ ಬಹಿರಂಗಪಡಿಸಿದೆ. ಅಲ್ಲದೆ ಸಿನಿಮಾಕ್ಕಾಗಿ ದುಡಿದ ತಂತ್ರಜ್ಞರಿಗೆ ದಚ್ಚು ನಿನ್ನೆ ಉಡುಗೊರೆಯನ್ನೂ ನೀಡಿದ್ದಾರೆ.
ಇನ್ನು ಬರೋಬ್ಬರಿ 108 ದಿನಗಳ ಕಾಲ ಶೂಂಟಿಂಗ್ ಮಾಡಿರುವ ಚಿತ್ರತಂಡ ಇದೀಗ ಸಾಂಗ್ ರೆಕಾರ್ಡಿಂಗ್ ಕೆಲಸಕ್ಕೆ ಕೈ ಹಾಕಿದೆ. ರಾಬರ್ಟ್ ಸಿನಿಮಾಕ್ಕೆ ಬೆಂಗಳೂರು, ಮೈಸೂರು, ಹೈದರಾಬಾದ್, ಪುದುಚೇರಿ, ವಾರಣಾಸಿ, ಲಕ್ನೋ ಸೇರಿದಂತೆ ಹಲವು ಕಡೆ ಶೂಟಿಂಗ್ ಮಾಡಲಾಗಿತ್ತು.