ಡಿ ಬಾಸ್ ನಟನೆಯ ರಾಬರ್ಟ್ ಚಿತ್ರ ಇದೇ ಮಾರ್ಚ್ 11 ರಂದು ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗುತ್ತಿದ್ದು, ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸಿದೆ. ಇತ್ತೀಚೆಗಷ್ಟೆ ರಾಬರ್ಟ್ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಖತ್ ಹವಾ ಎಬ್ಬಿಸಿತ್ತು.
ಇದೇ 20ಕ್ಕೆ ರಾಬರ್ಟ್ ಚಿತ್ರದ ಮೂರನೇ ಹಾಡು ರಿಲೀಸ್ - ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ
ರಾಬರ್ಟ್ ಇದೀಗ ಮತ್ತೆ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ ಈ ಚಿತ್ರದ ಮತ್ತೊಂದು ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಮುಂಬರುವ ಫೆ.20 ರಂದು ರಾಬರ್ಟ್ ಚಿತ್ರದ 'ಕಣ್ಣು ಹೊಡೆಯಾಕ' ಎಂಬ ಲಿರಿಕಲ್ ಹಾಡನ್ನು ರಿಲೀಸ್ ಮಾಡಲಾಗುತ್ತಿದೆ.
![ಇದೇ 20ಕ್ಕೆ ರಾಬರ್ಟ್ ಚಿತ್ರದ ಮೂರನೇ ಹಾಡು ರಿಲೀಸ್ ದೇ 20ಕ್ಕೆ ರಾಬರ್ಟ್ ಚಿತ್ರದ ಮೂರನೇ ಹಾಡು ರಿಲೀಸ್](https://etvbharatimages.akamaized.net/etvbharat/prod-images/768-512-10676772-thumbnail-3x2-giri.jpg)
ದೇ 20ಕ್ಕೆ ರಾಬರ್ಟ್ ಚಿತ್ರದ ಮೂರನೇ ಹಾಡು ರಿಲೀಸ್
ರಾಬರ್ಟ್ ಇದೀಗ ಮತ್ತೆ ಸುದ್ದಿಯಾಗುತ್ತಿದೆ. ಇದಕ್ಕೆ ಕಾರಣ ಈ ಚಿತ್ರದ ಮತ್ತೊಂದು ಹಾಡನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಮುಂಬರುವ ಫೆ.20 ರಂದು ರಾಬರ್ಟ್ ಚಿತ್ರದ 'ಕಣ್ಣು ಹೊಡೆಯಾಕ' ಎಂಬ ಲಿರಿಕಲ್ ಹಾಡನ್ನು ರಿಲೀಸ್ ಮಾಡಲಾಗುತ್ತಿದೆ.
ಈಗಾಗಲೇ ತೆರೆ ಕಂಡಿರುವ 'ಬಾ ಬಾ ಬಾ ನಾ ರೆಡಿ' ಹಾಗೂ 'ಜೈ ಶ್ರೀರಾಮ್' ಹಾಡುಗಳು ಸೂಪರ್ ಹಿಟ್ ಆಗಿವೆ. ಇದೀಗ ರಿಲೀಸ್ ಆಗುತ್ತಿರುವ ಕಣ್ಣು ಹೊಡೆಯಾಕ ಹಾಡಿನಲ್ಲಿ ದರ್ಶನ್ ಮತ್ತು ನಟಿ ಆಶಾ ಭಟ್ ಹೆಜ್ಜೆಹಾಕಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಿದ್ದು, ತರುಣ್ ಸುಧೀರ್ ನಿರ್ದೇಶನವಿದೆ.