ಕರ್ನಾಟಕ

karnataka

ETV Bharat / sitara

ಲಸಿಕೆ ಪಡೆಯುವ ಮುನ್ನ ರಕ್ತದಾನ.. ಮಾದರಿಯಾದ 'ರಾಬರ್ಟ್' ನಿರ್ದೇಶಕ - Robert movie directer sudher tarun donate blood before getting vaccine

ಕೊರೊನಾ ಮಹಾಮಾರಿಗೆ ಬೆಚ್ಚಿ ಈಗಾಗಲೇ ಸಾಕಷ್ಟು ಜನ ಲಸಿಕೆ ಪಡೆಯಲು ಮುಂದಾಗಿದ್ದಾರೆ. ಆದರೆ ಲಸಿಕೆ ಪಡೆದ ಕೆಲವು ದಿನ ಮಾತ್ರ ರಕ್ತ ದಾನ ಮಾಡುವಂತಿಲ್ಲ ಎಂಬುದನ್ನು ಅರಿತಿರುವ ರಾಬರ್ಟ್​ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಮೊದಲೇ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.

robert-movie-directer-sudher-tarun-donate-blood-before-getting-vaccine
ರಕ್ತದಾನ ಮಾಡಿದ ರಾಬರ್ಟ್ ನಿರ್ದೇಶಕ

By

Published : May 18, 2021, 9:10 PM IST

ಕೊರೊನಾ ಸಂದರ್ಭದಲ್ಲಿ ರಕ್ತದಾನ ಮಾಡುವವರ ಸಂಖ್ಯೆ ಕಡಿಮೆ ಆಗಿದೆ. ಈ ಮಧ್ಯೆ ಕೆಲ ವಿದ್ಯಾವಂತರು ಕೊರೊನಾ ಲಸಿಕೆ ಪಡೆಯುವ ಮುನ್ನ ರಕ್ತದಾನ ಮಾಡಿ ಜಾಗೃತಿ ಮೂಡಿಸುತ್ತಿದ್ದಾರೆ. ಇದೀಗ ಚೌಕ ಹಾಗೂ ರಾಬರ್ಟ್ ಸಿನಿಮಾದ ನಿರ್ದೇಶಕ ತರುಣ್ ಸುಧೀರ್ ಕೂಡ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಮುನ್ನ ರಕ್ತದಾನ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.

ರಾಬರ್ಟ್​ ಸಿನಿಮಾದ ನಿರ್ದೇಶಕ ತರುಣ್ ಸುಧೀರ್

ಹೌದು, ನಿರ್ದೇಶಕ ತರುಣ್ ಸುಧೀರ್, ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಹಿಂದಿನ ದಿನ ರಕ್ತದಾನ ಮಾಡಿ ನಂತರ ಕೋವಿಡ್ ಲಸಿಕೆ ಪಡೆದುಕೊಂಡಿದ್ದಾರೆ. 'ರಕ್ತದಾನ ಬೇರೆಯವರ ಜೀವ ಉಳಿಸಿದರೆ, ಲಸಿಕೆ ನಮ್ಮ ಜೀವ ಉಳಿಸುತ್ತದೆ' ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ರಕ್ತದಾನ ಮಾಡುತ್ತಿರುವ ಫೋಟೋವೊಂದನ್ನು ಹಂಚಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ಕೆಲ ದಿನಗಳ ಹಿಂದೆ ನಟ ವಸಿಷ್ಠ ಸಿಂಹ ಕೂಡಾ ಕೋವಿಡ್ ಲಸಿಕೆ ಪಡೆಯುವುದಕ್ಕೂ ಮೊದಲು ರಕ್ತದಾನ ಮಾಡಿ ಜಾಗೃತಿ ಮೂಡಿಸಿದ್ದರು. ಈಗ 'ರಕ್ತದಾನ ಮಹಾದಾನ' ಎಂದು ವಿನಂತಿ ಮಾಡುವ ಮೂಲಕ ತರುಣ್ ಸುಧೀರ್ ಬೇರೆಯವರಿಗೂ ಕರೆ ನೀಡಿದ್ದಾರೆ.

ಓದಿ:Oscars 2021 PHOTOS: ಯಾರ ಮುಡಿಗೆ ಪ್ರತಿಷ್ಠಿತ ಪ್ರಶಸ್ತಿಯ ಗರಿ?

ABOUT THE AUTHOR

...view details