ಕರ್ನಾಟಕ

karnataka

ETV Bharat / sitara

ಟಾಲಿವುಡ್​​​ನಲ್ಲೂ ಅಬ್ಬರಿಸಲು ರೆಡಿಯಾದ 'ರಾಬರ್ಟ್' - ರಾಬರ್ಟ್ ಕನ್ನಡ ಸಿನಿಮಾ

ರಾಬರ್ಟ್‌ ಸಿನಿಮಾವನ್ನು ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಒಂದು ಮೂಲದ‌ ಪ್ರಕಾರ ರಾಬರ್ಟ್‌ ಚಿತ್ರದ ಬಿಡುಗಡೆಗೆ ತೆಲುಗಿನಲ್ಲಿ ವಿರೋಧ ಆಗಿಲ್ಲ. ಆದರೆ ಮಾರ್ಚ್‌ 11 ರಂದೇ ತೆಲುಗಿನಲ್ಲೂ ಒಂದು ಅದ್ಧೂರಿ ವೆಚ್ಚದ ಚಿತ್ರ ತೆರೆ ಕಾಣುತ್ತಿದೆ. ಹಾಗಾಗಿ ಒಂದಷ್ಟು ಗೊಂದಲ ನಿರ್ಮಾಣವಾಗಿದೆ ಎನ್ನಲಾಗುತ್ತದೆ.

Robert Kannada Cinema Release
ಟಾಲಿವುಡ್​​​ನಲ್ಲಿ ಅಬ್ಬರಿಸೋದಿಕ್ಕ ರೆಡಿಯಾದ ರಾಬರ್ಟ್

By

Published : Feb 1, 2021, 11:29 AM IST

ಕನ್ನಡ ಚಿತ್ರರಂಗದಲ್ಲಿ ಟೈಟಲ್ ನಿಂದಲೇ ನಿರೀಕ್ಷೆ ಹುಟ್ಟಿಸಿರೋ ಚಿತ್ರ ರಾಬರ್ಟ್‌. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ತೆಲುಗಿನಲ್ಲಿ ಬಿಡುಗಡೆಗೆ ಸಜ್ಜಾಗಿದೆ.

ಟಾಲಿವುಡ್​ನಲ್ಲಿ ಚಿತ್ರದ ಬಿಡುಗಡೆಗೆ ಅಡ್ಡಿ ಎದುರಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದರ್ಶನ್ ಮತ್ತು ನಿರ್ಮಾಪಕ ಉಮಾಪತಿ ದೂರು ನೀಡಿದ್ದರು.

ತೆಲುಗಿನ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಸಮ್ಮತಿ

ಈ ಸಂಬಂಧ, ಈಗ ಸೌತ್ ಫಿಲಂ ಚೇಂಬರ್ ಸಭೆಯಲ್ಲಿ ರಾಬರ್ಟ್ ಸಿನಿಮಾವನ್ನು ತೆಲುಗಿನ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಲು ಸಮ್ಮತಿ ಸಿಕ್ಕಿದೆ. ತೆಲುಗು ಚಿತ್ರರಂಗದ ಹೊಸ ನೀತಿ ವಿರುದ್ಧ ದರ್ಶನ್‌ ಗರಂ ಆಗಿದ್ದರು. ಇದರಿಂದ ಸೌತ್‌ ಸಿನಿಮಾ ಇಂಡಸ್ಟ್ರಿಯಲ್ಲೇ ಒಂದು ಮಟ್ಟಿಗೆ ಸದ್ದು ಮಾಡಿತ್ತು. ಕೂಡಲೇ ಕನ್ನಡ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್, ಗೌರವ ಕಾರ್ಯದರ್ಶಿ ಎನ್. ಎಂ ಸುರೇಶ್ ಸೇರಿದಂತೆ ಹಲವು ಪದಾಧಿಕಾರಿಗಳು, ಸೌತ್ ಫಿಲ್ಮ್ ಚೇಂಬರ್ ಅಧ್ಯಕ್ಷ ಕಲ್ಯಾಣ್ ಜೊತೆ ಚರ್ಚೆಸಿ ಸಮಸ್ಯೆಯನ್ನ ಬಗೆ ಹರಿಸಿದ್ದಾರೆ.

ರಾಬರ್ಟ್‌ ಚಿತ್ರವನ್ನು ನೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಂಡ ಸಜ್ಜಾಗಿದೆ. ಒಂದು ಮೂಲದ‌ ಪ್ರಕಾರ ಈ ಚಿತ್ರದ ಬಿಡುಗಡೆಗೆ ತೆಲುಗಿನಲ್ಲಿ ವಿರೋಧ ವ್ಯಕ್ತವಾಗಿಲ್ಲ. ಆದರೆ ಮಾರ್ಚ್‌ 11 ರಂದೇ ಟಾಲಿವುಡ್​ನಲ್ಲೂ ಒಂದು ಅದ್ಧೂರಿ ವೆಚ್ಚದ ಚಿತ್ರ ತೆರೆ ಕಾಣುತ್ತಿದೆ. ಹಾಗಾಗಿ ಒಂದಷ್ಟು ಗೊಂದಲ ನಿರ್ಮಾಣವಾಗಿದೆ ಎನ್ನಲಾಗುತ್ತದೆ.

ಓದಿ : ಡಾಲಿಯ 'ರತ್ನನ್ ಪ್ರಪಂಚ' ನೋಡಲು ಮುಗಿಬಿದ್ದ ಲಕ್ಕುಂಡಿ ಜನ.. ಅಭಿಮಾನಿಗಳಿಗೆ ಕೈಬೀಸಿದ ಅಲ್ಲಮ..

ABOUT THE AUTHOR

...view details