ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ಸಿನಿಮಾ 'ರಾಬರ್ಟ್' ಮಾರ್ಚ್ 11 ರಂದು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಬಿಡುಗಡೆ ಆಗಲು ಸಿದ್ಧವಾಗಿದೆ. ಸಿನಿಮಾ ಬಿಡುಗಡೆಗೆ 7 ದಿನಗಳಷ್ಟೇ ಬಾಕಿ ಉಳಿದಿದ್ದು 'ರಾಬರ್ಟ್' ಸೆನ್ಸಾರ್ನಲ್ಲಿ ಕೂಡಾ ಪಾಸಾಗಿದ್ದಾನೆ.
ಸೆನ್ಸಾರ್ ಮಂಡಳಿ 'ರಾಬರ್ಟ್' ಚಿತ್ರ ವೀಕ್ಷಿಸಿ ಯು/ಎ ಪ್ರಮಾಣ ಪತ್ರ ನೀಡಿದೆ. ಕರ್ನಾಟಕ ಮಾತ್ರವಲ್ಲ ಆಂಧ್ರ ಹಾಗೂ ತೆಲಂಗಾಣದಲ್ಲಿ ಕೂಡಾ ರಾಬರ್ಟ್ ಹವಾ ಜೋರಾಗಿದೆ. ಕಣ್ಣು ಹೊಡೆಯಾಕ...ಹಾಡು ಕನ್ನಡಕ್ಕಿಂತ ಹೆಚ್ಚಾಗಿ ತೆಲುಗಿನಲ್ಲಿ ದೊಡ್ಡ ಮಟ್ಟಿಗೆ ಹಿಟ್ ಆಗಿದೆ. ಕನ್ನಡದಲ್ಲಿ ಈ ಹಾಡನ್ನು ಶ್ರೇಯಾ ಘೋಷಾಲ್ ಹಾಡಿದ್ದರೆ ತೆಲುಗಿನಲ್ಲಿ ಕಣ್ನೆ ಅದಿರಿಂದಿ... ಹಾಡನ್ನು ಮಂಗಳಿ ಹಾಡಿದ್ದಾರೆ. ಕಳೆದ ವಾರವಷ್ಟೇ ಚಿತ್ರತಂಡ ಹೈದರಾಬಾದ್ ಹಾಗೂ ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಪ್ರೀ ರಿಲೀಸ್ ಕಾರ್ಯಕ್ರಮ ಕೂಡಾ ಯಶಸ್ವಿಯಾಗಿತ್ತು. ಒಟ್ಟಿನಲ್ಲಿ ಸಿನಿಮಾ ಬಿಡುಗಡೆಗೆ ಕನ್ನಡ, ತೆಲುಗು ಪ್ರೇಕ್ಷಕರಿಬ್ಬರೂ ಕಾಯುತ್ತಿದ್ದಾರೆ.