ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಕರ್ನಾಟಕ ಮಾತ್ರವಲ್ಲ ಆಂಧ್ರ ಹಾಗೂ ತೆಲಂಗಾಣದಲ್ಲಿ ಕೂಡಾ ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿರುವ ಸಿನಿಮಾ. 'ರಾಬರ್ಟ್' ಹಾಡುಗಳು, ಪ್ರೀ ರಿಲೀಸ್ ಈವೆಂಟ್ ನೋಡಿದ ಅಭಿಮಾನಿಗಳು ಸಿನಿಮಾ ನೋಡಲು ಕೂಡಾ ಅಷ್ಟೇ ಕಾತರದಿಂದ ಕಾಯುತ್ತಿದ್ದಾರೆ.
'ರಾಬರ್ಟ್' ಮೊದಲ ಮೇಕಿಂಗ್ ವಿಡಿಯೋ ರಿವೀಲ್...ತೆರೆ ಹಿಂದಿನ ರಹಸ್ಯ ಬಿಚ್ಚಿಟ್ಟ ಚಿತ್ರತಂಡ - Roberrt first making video
ಬಹುನಿರೀಕ್ಷಿತ 'ರಾಬರ್ಟ್' ಚಿತ್ರದ ಮೊದಲ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದೆ. ಮಂಗಳವಾರ ಹಾಗೂ ಬುಧವಾರ ಇನ್ನೆರಡು ಮೇಕಿಂಗ್ ವಿಡಿಯೋಗಳು ಬಿಡುಗಡೆ ಆಗಲಿದ್ದು ಗುರುವಾರ ಸಿನಿಮಾ ತೆರೆಗೆ ಅಪ್ಪಳಿಸಲಿದೆ.
ಇದನ್ನೂ ಓದಿ:10ನೇ ವಿವಾಹ ವಾರ್ಷಿಕೋತ್ಸವ: ಪ್ರೇಮ ಸೌಧಕ್ಕೆ ಭೇಟಿ ನೀಡಿದ ಅಲ್ಲು ಅರ್ಜುನ್ ದಂಪತಿ!
ಮಾರ್ಚ್ 11 ಶಿವರಾತ್ರಿಯಂದು ಸಿನಿಮಾ ಬಿಡುಗಡೆಯಾಗುತ್ತಿದ್ದು ಚಿತ್ರತಂಡ ಪ್ರಮೋಷನ್ ಕೆಲಸಗಳಲ್ಲಿ ಬ್ಯುಸಿ ಇದೆ. ಚಿತ್ರತಂಡ ಮೂರು ಕಂತುಗಳಲ್ಲಿ 'ರಾಬರ್ಟ್' ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಿದ್ದು ಇಂದು ಮೊದಲನೇ ವಿಡಿಯೋ ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ 'ರಾಬರ್ಟ್' ಶುರುವಾದ ಕಥೆ, ಫೋಟೋ ಶೂಟ್, ಆ್ಯಕ್ಷನ್ ಸೀಕ್ವೆನ್ಸ್, ಹೀರೋಯಿನ್ ಎಂಟ್ರಿ ಹೀಗೆ ಹಲವು ಆಸಕ್ತಿಕರ ವಿಚಾರಗಳಿವೆ. ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಹೀರೋ ದರ್ಶನ್, ನಟಿ ಆಶಾ ಭಟ್, ತೆಲುಗು ಸಿನಿಮಾ ಇಂಡಸ್ಟ್ರಿಯ ಖ್ಯಾತ ಸ್ಟಂಟ್ ಮಾಸ್ಟರ್ಗಳಾದ ರಾಮ್ ಲಕ್ಷ್ಮಣ್, ಮತ್ತೊಬ್ಬ ಸ್ಟಂಟ್ ಮಾಸ್ಟರ್ ವಿನೋದ್ ಈ'ರಾಬರ್ಟ್' ಸಿನಿಮಾದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಮುಖ್ಯವಾಗಿ ಚಿತ್ರದಲ್ಲಿ ದರ್ಶನ್ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿರುವ ಸನ್ನಿವೇಶಗಳನ್ನು ಈ ಮೇಕಿಂಗ್ ವಿಡಿಯೋ ಒಳಗೊಂಡಿದೆ.