ಕರ್ನಾಟಕ

karnataka

ETV Bharat / sitara

'ರಾಬರ್ಟ್' ಫಸ್ಟ್​​​​​​ಲುಕ್ ಮೋಷನ್ ಪೋಸ್ಟರ್ ರಿಲೀಸ್​​​​​​​​​​​​​​​, ಅಭಿಮಾನಿಗಳ ದಿಲ್‌ ಖುಷ್​​​​​​​ - ರಾಬರ್ಟ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ

'ರಾಬರ್ಟ್' ಚಿತ್ರದ ಫಸ್ಟ್​​​​​​​ಲುಕ್ ಬಿಡುಗಡೆ ಆಗಿದ್ದು ದಾಸನ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. 1:17 ಸೆಕೆಂಡ್ ಅವಧಿಯ ಈ ಫಸ್ಟ್​​​​​​​​ಲುಕ್ ಮೋಷನ್ ಪೋಸ್ಟರ್​​​​ನಲ್ಲಿ ದರ್ಶನ್ ಬ್ಲಾಕ್​ ಕಾಸ್ಟ್ಯೂಮ್​​​ನಲ್ಲಿ ಉದ್ದನೆ ಕೂದಲು ಬಿಟ್ಟು ಗನ್ ಹಿಡಿದು ಸ್ಟೈಲ್ ಆಗಿ ನಿಂತಿದ್ದಾರೆ.

Roberrt First Look Motion Poster out
'ರಾಬರ್ಟ್' ಫಸ್ಟ್​​​​​​ಲುಕ್ ಮೋಷನ್ ಪೋಸ್ಟರ್

By

Published : Dec 25, 2019, 12:51 PM IST

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಫಸ್ಟ್​​​​​​ಲುಕ್ ಮೋಷನ್ ಪೋಸ್ಟರ್​​​​​​​​​​​​​​​​​​​​​​​​​​​​​​​​​​​​ ಬಿಡುಗಡೆಯಾಗಿದೆ. 'ಕ್ರಿಸ್​​ಮಸ್​​ ಹಬ್ಬದ ಪ್ರಯುಕ್ತ ಇಂದು ಚಿತ್ರದ ಫಸ್ಟ್​​​ಲುಕ್ ಬಿಡುಗಡೆ ಮಾಡುವುದಾಗಿ ನಟ ದರ್ಶನ್ ತಮ್ಮ ಟ್ವಿಟ್ಟರ್​​​​ನಲ್ಲಿ ನಿನ್ನೆ ಪೋಸ್ಟ್ ಶೇರ್ ಮಾಡಿದ್ದರು.

ಚಿತ್ರತಂಡ ಇಂದು ಬೆಳಗ್ಗೆ 'ರಾಬರ್ಟ್' ಚಿತ್ರದ ಫಸ್ಟ್​​​​​​​ಲುಕ್ ಬಿಡುಗಡೆ ಮಾಡಿದ್ದು ದಾಸನ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. 1:17 ಸೆಕೆಂಡ್ ಅವಧಿಯ ಈ ಫಸ್ಟ್​​​​​​​​ಲುಕ್ ಮೋಷನ್ ಪೋಸ್ಟರ್​​​​ನಲ್ಲಿ ದರ್ಶನ್ ಬ್ಲಾಕ್​ ಕಾಸ್ಟ್ಯೂಮ್​​​ನಲ್ಲಿ ಉದ್ದನೆ ಕೂದಲು ಬಿಟ್ಟು ಗನ್ ಹಿಡಿದು ಸ್ಟೈಲ್ ಆಗಿ ನಿಂತಿದ್ದಾರೆ. ದರ್ಶನ್​ ಅವರ ಈ ಲುಕ್​​​​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದಕ್ಕೂ ಮುನ್ನವೇ ಚಿತ್ರದ ಎರಡು ಪೋಸ್ಟರ್​​​​​ಗಳು ಬಿಡುಗಡೆಯಾಗಿದ್ದವು. ದರ್ಶನ್ ಬೈಕ್ ಮೇಲೆ ಕುಳಿತಿರುವ ದೃಶ್ಯ ಹಾಗೂ ವಿನೋದ್ ಪ್ರಭಾಕರ್ ಜೊತೆ ಇರುವ ಪೋಸ್ಟರ್​​ಗಳು ಬಿಡುಗಡೆ ಆಗಿತ್ತು. ಇದೀಗ ಈ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು ಬಿಡುಗಡೆಯಾದ 30 ನಿಮಿಷದಲ್ಲಿ ಸುಮಾರು 2.75 ಲಕ್ಷ ಜನರು ವೀಕ್ಷಿಸಿದ್ದಾರೆ.

'ರಾಬರ್ಟ್' ಚಿತ್ರವನ್ನು ಉಮಾಪತಿ ಫಿಲ್ಮ್ಸ್​​​ ಬ್ಯಾನರ್ ಅಡಿಯಲ್ಲಿ ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಿಸುತ್ತಿದ್ದು ತರುಣ್ ಸುಧೀರ್ ನಿರ್ದೇಶಿಸುತ್ತಿದ್ದಾರೆ. ವಿನೋದ್ ಪ್ರಭಾಕರ್ ಕೂಡಾ ಚಿತ್ರದಲ್ಲಿ ದರ್ಶನ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಉಳಿದಂತೆ ಆಶಾ ಭಟ್, ಜಗಪತಿ ಬಾಬು, ರವಿಕಿಶನ್ ಹಾಗೂ ಇತರರು ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತವಿದೆ. ಮುಂದಿನ ವರ್ಷ 'ರಾಬರ್ಟ್' ತೆರೆಗೆ ಬರಲಿದ್ದಾನೆ.

ABOUT THE AUTHOR

...view details