ಚೇತನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಚಿತ್ರದ ಟ್ರೈಲರ್ ಹಾಗೂ ಟೀಸರ್ ಸಖತ್ ಹವಾ ಕ್ರಿಯೇಟ್ ಮಾಡಿದೆ. ಚಿತ್ರ ತಂಡ ಕಳೆದ ವಾರವಷ್ಟೇ ಚಿತ್ರದ ಟೈಟಲ್ ಸಾಂಗ್ನ ಲಿರಿಕಲ್ ವಿಡಿಯೋವನ್ನು ಸ್ವಿಜರ್ಲ್ಯಾಂಡ್ನಲ್ಲಿ ಲಾಂಚ್ ಮಾಡಿತ್ತು.
ಕಾರಿನಲ್ಲಿ ಭರಾಟೆ ಟೈಟಲ್ ಟ್ರಾಕ್ಗೆ ನಾಯಕಿ ಜೊತೆ ರೋರಿಂಗ್ ಸ್ಟಾರ್ ಭರ್ಜರಿ ಸ್ಟೆಪ್! ವಿಡಿಯೋ... - srilila
ಸ್ವಿಜರ್ಲ್ಯಾಂಡ್ನಲ್ಲಿ ಭರಾಟೆ ಚಿತ್ರದ ಶೂಟಿಂಗ್ನಲ್ಲಿರುವ ರೋರಿಂಗ್ ಸ್ಟಾರ್ ಶ್ರೀಮುರುಳಿ ಚಿತ್ರದ ಹಿರೋಯಿನ್ ಶ್ರೀಲೀಲಾ ಜೊತೆ ಚಿತ್ರದ ಟೈಟಲ್ ಟ್ರಾಕ್ಗೆ ಕಾರ್ನಲ್ಲೇ ಭರ್ಜರಿ ಸ್ಟೆಪ್ಸ್ ಹಾಕಿ ಎಂಜಾಯ್ ಮಾಡಿದ್ದಾರೆ.
ಹಾಡಿಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಯೂಟ್ಯೂಬ್ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ಇನ್ನೂ ಈ ಸಾಂಗ್ಗೆ ಫಿದಾ ಆಗಿರುವ ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ನಾಯಕಿ ಶ್ರೀಲೀಲಾ ಸ್ವಿಜರ್ಲ್ಯಾಂಡ್ನಲ್ಲಿ ಭರ್ಜರಿ ಸಾಂಗ್ ಶೂಟಿಂಗ್ ವೇಳೆ ಭರಾಟೆ ಸಾಂಗ್ ಅನ್ನ ಕಾರಿನಲ್ಲಿ ಪ್ಲೇ ಮಾಡಿಕೊಂಡು ಜಬರ್ದಸ್ತ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.
ಇನ್ನೂ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಟ್ಯೂನಿಗೆ ನಿರ್ದೇಶಕ ಚೇತನ್ ಬರೆದಿರುವ ಸಾಹಿತ್ಯ ಸಖತ್ ವರ್ಕೌಟ್ ಆಗಿದೆ. ಟಿಕ್ಟಾಕ್ನಲ್ಲೂ ಈಗ ಭರಾಟೆ ಸಾಂಗ್ದೇ ಹವಾ ಶುರುವಾಗಿದೆ. ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ಭರ್ಜರಿ ಚೇತನ್ ಕಾಂಬಿನೇಷನ್ನಲ್ಲಿ ಸುಪ್ರಿತ್ ಭರಾಟೆ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸದ್ಯ ಚಿತ್ರ ತಂಡ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿದ್ದು ಸೆಪ್ಟೆಂಬರ್ 27 ಕ್ಕೆ ರಾಜ್ಯಾದ್ಯಂತ ಭರಾಟೆ ಚಿತ್ರ ರಿಲೀಸ್ ಆಗಲಿದೆ.