ರೋರಿಂಗ್ ಸ್ಟಾರ್ ಶ್ರೀ ಮುರಳಿ ಅಭಿನಯದ (Roaring Star Sri Murali) ಬಹು ನಿರೀಕ್ಷಿತ ಮದಗಜ ಚಿತ್ರದ ಟ್ರೇಲರ್ ರಿಲೀಸ್ (Madagaja Trailer) ಆಗಿದೆ. ಅಷ್ಟೇ ಅಲ್ಲ, ಅದು ರಿಲೀಸ್ ಆದ ಒಂದು ಗಂಟೆಯಲ್ಲೇ 1 ಮಿಲಿಯನ್ ವೀಕ್ಷಣೆ ಪಡೆದಿದೆ.
ಖಾಸಗಿ ಹೋಟೆಲ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರು ಮದಗಜ ಟ್ರೇಲರ್ ಲಾಂಚ್ ಮಾಡಿದರು. ನಿರ್ದೇಶಕ ಮಹೇಶ್ ಕುಮಾರ್ ಚಿತ್ರ ನಿರ್ದೇಶಿಸಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ.