ಕರ್ನಾಟಕ

karnataka

ETV Bharat / sitara

ಹೈದರಾಬಾದ್​​​​ನಲ್ಲಿ 'ಭರಾಟೆ' ಟೀಂ​​​​​​​​: ರೋರಿಂಗ್​ಸ್ಟಾರ್​​​ಗೆ ರಂಗಾಯಣ ರಘು, ತಾರಾ ಸಾಥ್​ - undefined

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರದ ಶೂಟಿಂಗ್ ಇದೀಗ ಹೈದರಾಬಾದ್​​ನ ರಾಮೋಜಿ ಫಿಲಮ್ ಸಿಟಿಯಲ್ಲಿ ನಡೆಯುತ್ತಿದೆ. ರಂಗಾಯಣ ರಘು, ಶ್ರೀ ಮುರಳಿ , ತಾರಾ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.

ರಂಘಾಯಣ ರಘು, ತಾರಾ, ಶ್ರೀಮುರಳಿ

By

Published : Feb 12, 2019, 9:57 PM IST

'ಭರಾಟೆ' ಚಿತ್ರದ ಶೂಟಿಂಗ್​​
ಭರ್ಜರಿ ಚೇತನ್ ನಿರ್ದೇಶಿಸುತ್ತಿರುವ 'ಭರಾಟೆ' ಶೂಟಿಂಗ್ ಭರದಿಂದ ಸಾಗುತ್ತಿದೆ. ಸದ್ಯಕ್ಕೆ ಚಿತ್ರತಂಡ ಹೈದರಾಬಾದ್​​​ನಲ್ಲಿ ಬೀಡುಬಿಟ್ಟಿದ್ದು, ರೋರಿಂಗ್ ಸ್ಟಾರ್​​​​​​ಗೆ ತಾರಾ ಹಾಗೂ ರಂಗಾಯಣ ರಘು ಸಾಥ್ ನೀಡಿದ್ದಾರೆ.

ಹೈದರಾಬಾದ್​​​ ರಾಮೋಜಿ ಫಿಲ್ಮ್​ ಸಿಟಿಯ ರೈಲ್ವೆ ಸ್ಟೇಷನ್ ಸೆಟ್​​ನಲ್ಲಿ ತಾರಾ, ರಂಗಾಯಣ ರಘು, ಶ್ರೀಮುರಳಿ ಅಭಿನಯದ ಕೆಲವೊಂದು ದೃಶ್ಯಗಳನ್ನು ನಿರ್ದೇಶಕ ಚೇತನ್ ಚಿತ್ರೀಕರಿಸಿಕೊಂಡರು. ಚಿತ್ರದ ಶೂಟಿಂಗ್ ಬಹುತೇಕ ಮುಗಿದಿದ್ದು, ಮಾಸ್ ಜೋಡಿ ಶ್ರೀಮುರಳಿ ಹಾಗೂ ಚೇತನ್​​​ ಜೋಡಿಯ ಮೇಲೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚಾಗುತ್ತಿದೆ.

ಸುಪ್ರೀತ್ 'ಭರಾಟೆ' ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಶ್ರೀಮುರಳಿಗೆ ನಾಯಕಿಯಾಗಿ ಶ್ರೀಲೀಲಾ ನಟಿಸುತ್ತಿದ್ದಾರೆ. ರಾಜಸ್ಥಾನದಲ್ಲೂ ಭರ್ಜರಿ ಶೂಟಿಂಗ್ ನಡೆಸಲಾಗಿದೆ. ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಯಾವ ರೀತಿ ಮೋಡಿ ಮಾಡುತ್ತೆ ಎಂಬುದನ್ನು ಕಾದು ನೋಡಬೇಕಿದೆ.

For All Latest Updates

TAGGED:

ABOUT THE AUTHOR

...view details