ಕರ್ನಾಟಕ

karnataka

ETV Bharat / sitara

ಪತ್ನಿ ಡ್ರೈವಿಂಗ್​ ಕೌಶಲ್ಯದ ಬಗ್ಗೆ ತಮಾಷೆಯ ವಿಡಿಯೋ ಹರಿಬಿಟ್ಟ ನಟ ರಿತೇಶ್ - ನಟಿ ಜೆನಿಲಿಯಾ

ಬಾಲಿವುಡ್ ನಟ ರಿತೇಶ್ ದೇಶ್​ಮುಖ್​ ಮಕ್ಕಳೊಂದಿಗೆ ಸೇರಿ, ಪತ್ನಿ ಜೆನಿಲಿಯಾ ಅವರ ಡ್ರೈವಿಂಗ್​ ಕೌಶಲ್ಯದ ಬಗೆಗಿನ ತಮಾಷೆಯ ವಿಡಿಯೋವೊಂದನ್ನು ಮಾಡಿದ್ದಾರೆ.

riteish deshmukh funny videos
ಪತ್ನಿ ಡ್ರೈವಿಂಗ್​ ಕೌಶಲ್ಯದ ಬಗ್ಗೆ ತಮಾಷೆಯಾ ವಿಡಿಯೋ ಹರಿಬಿಟ್ಟ ನಟ ರಿತೇಶ್

By

Published : Jul 19, 2021, 2:16 PM IST

ಹೈದರಾಬಾದ್​:ಬಾಲಿವುಡ್ ನಟ ರಿತೇಶ್ ದೇಶ್​ಮುಖ್​ ತಮ್ಮ ಪತ್ನಿ, ನಟಿ ಜೆನಿಲಿಯಾ ಅವರ ಡ್ರೈವಿಂಗ್​ ಕೌಶಲ್ಯದ ಬಗೆಗಿನ ತಮಾಷೆಯ ವಿಡಿಯೋಂದನ್ನು ಇನ್​​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಇದರಲ್ಲಿ ಅವರ ಮಕ್ಕಳಾದ ರಿಯಾನ್ ದೇಶ್​ಮುಖ್ ಮತ್ತು ರಹೀಲ್ ದೇಶ್​ಮುಖ್ ಕೂಡ ಇದ್ದಾರೆ. ಇನ್​​ಸ್ಟಾಗ್ರಾಮ್​ನಲ್ಲಿ ಆಗಾಗ್ಗೆ ತಮಾಷೆಯ ವಿಡಿಯೋಗಳನ್ನು ಹಂಚಿಕೊಳುತ್ತಿರುತ್ತಾರೆ. ರಿತೇಶ್ ಮತ್ತು ಅವರ ಮಕ್ಕಳನ್ನೊಳಗೊಂಡ ಈ ರೀಲ್​, ಮಕ್ಕಳು ಕಿಟಕಿಯ ಬಳಿ ನಿಂತು ಹೊರಗೆ ನೋಡುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ಹಿಂದಿನಿಂದ ಬಂದ ಕಾರೊಂದು ಮುಂದಿನ ಕಾರಿಗೆ ಡಿಕ್ಕಿ ಹೊಡೆಯುವ ದೃಶ್ಯ ಕಾಣುತ್ತದೆ. ಆಗ ಅವರ ಮಕ್ಕಳು ಮರಾಠಿಯಲ್ಲಿ 'ಬಾಬಾ ಆಯಿ ಆಲಿ' (ಅಮ್ಮ ಬಂದರು) ಎಂದು ಕಿರುಚುತ್ತಾರೆ.

ಬಳಿಕ ರೂಬಿಕ್ಸ್ ಕ್ಯೂಬ್​ ಆಡುವುದರಲ್ಲಿ ನಿರತರಾಗಿದ್ದ ರಿತೀಶ್ ಹತ್ತಿರ ಬಂದು 'ಮಾಮ್ ನಿಮ್ಮ ಕಾರನ್ನು ತೆಗೆದುಕೊಂಡು ಹೋಗಿದ್ದರು' ಎನ್ನುತ್ತಾರೆ. ಈ ವೇಳೆ ಓಂ ಶಾಂತಿ ಓಂ ಸಿನಿಮಾದ 'ಚಾನ್ ಸೆ ಜೋ ಟ್ಯೂಟ್ ಕೊಯಿ ಸಪ್ನಾ' ಹಾಡು ಪ್ಲೇ ಆಗುತ್ತದೆ.

ರಿತೀಶ್ ಅವರ ಈ ಪೋಸ್ಟ್ ಅನ್ನು​ ಶಿಲ್ಪಾ ಶೆಟ್ಟಿ, ಸುನೀಲ್​ ಶೆಟ್ಟಿ, ಫರಾಹ್ ಖಾನ್ ಕುಂದರ್ ಸೇರಿದಂತೆ ಅನೇಕರು ಲೈಕ್​ ಮಾಡಿದ್ದಾರೆ. ಆದರೆ, ಪತ್ನಿ ಜೆನಿಲಿಯಾ ಈ ತಮಾಷೆಯ ವಿಡಿಯೋಗೆ ಇನ್ನೂ ಪ್ರತಿಕ್ರಿಯಿಸಿಲ್ಲ.

ABOUT THE AUTHOR

...view details