ಶಂಕರ್ ನಾಗ್ ಅಭಿನಯದ 'ನೋಡಿ ಸ್ವಾಮಿ ನಾವಿರೋದು ಹೀಗೆ' ಕನ್ನಡದ ಕ್ಲಾಸಿಕ್ ಚಿತ್ರಗಳಲ್ಲೊಂದು. ಹೆಸರಿನಿಂದ ಮೇಕಿಂಗ್ವರೆಗೂ ಹಲವು ವಿಭಿನ್ನತೆ ಹೊಂದಿರುವ ಚಿತ್ರಕ್ಕೆ ಇಂದಿಗೂ ದೊಡ್ಡ ಅಭಿಮಾನಿ ಬಳಗವಿದೆ. ಇದೀಗ ಬಹುತೇಕ ಇದೇ ತರಹದ ಟೈಟಲ್ ಇರುವ ಇನ್ನೊಂದು ಸಿನಿಮಾ ಸುದ್ದಿಯಲ್ಲಿದೆ. ಆ ಸಿನಿಮಾದ ಹೆಸರೇ 'ನೋಡಿ ಸ್ವಾಮಿ ಇವನು ಇರೋದೇ ಹೀಗೆ'.
ಆಪರೇಷನ್ ಅಲಮೇಲಮ್ಮ, ಕವಲುದಾರಿ, ಸಾರ್ವಜನಿಕರಿಗೆ ಸುವರ್ಣಾವಕಾಶ ಚಿತ್ರಗಳ ಖ್ಯಾತಿಯ ರಿಷಿ, ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಸೋಮವಾರ ರಿಷಿ ಅವರ ಹುಟ್ಟುಹಬ್ಬವಾದ ಕಾರಣ ಚಿತ್ರದ ಶೀರ್ಷಿಕೆಯನ್ನು ಘೋಷಿಸಲಾಗಿದೆ. ಲಾಕ್ಡೌನ್ಗೂ ಮುನ್ನವೇ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಬಹುತೇಕ ಮುಗಿದಿದೆ. ಇದೀಗ ಬಾಕಿಯಿರುವ ಕೆಲಸಗಳನ್ನು ಸಾಧ್ಯವಾದಷ್ಟೂ ಬೇಗ ಮುಗಿಸಿ, ಸಿನಿಮಾ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಚಿಸುತ್ತಿದೆ.