ಈ ಕೊರೊನಾ ಜನರ ಜೀವನದ ಮೇಲೆ ಎಷ್ಟರ ಮಟ್ಟಿಗೆ ಆಟ ಆಡುತ್ತಿದೆ ಎಂದರೆ, ನಿಧನರಾದ ತಮ್ಮ ತಂದೆಯ ಅಂತ್ಯ ಕ್ರಿಯೆಯಲ್ಲಿಯೂ ಭಾಗಿಯಾಗದಂತೆ ಅಡ್ಡಿ ಮಾಡಿದೆ.
ಹೌದು ನಿನ್ನೆ ನಿಧನರಾಗಿರುವ ಬಾಲಿವುಡ್ನ ಹಿರಿಯ ನಟ ರಿಷಿ ಕಪೂರ್ ಮಗಳು ರಿದ್ದಿಮಾ ಕಪೂರ್ ತಮ್ಮ ತಂದೆಯ ಅಂತ್ಯ ಕ್ರಿಯೆಯಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ ಎಂಬ ನೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಇವರಿಗೆ ಸಂಚಾರಿ ಪಾಸ್ ಸಿಕ್ಕಿದ್ದು ದೆಹಲಿಯಿಂದ ಮುಂಬೈಗೆ ತೆರಳಿದ್ದಾರೆ.
ಇನ್ನು ದೆಹಲಿಯಿಂದ ಮುಂಬೈಗೆ ತೆರಳುವಾಗ ಸಣ್ಣ ವಿಡಿಯೋವೊಂದನ್ನು ಮಾಡಿರುವ ರಿದ್ದಿಮಾ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋಕ್ಕೆ ನಾನು ಡ್ರೈವಿಂಗ್ ಮಾಡುತ್ತ ಮುಂಬೈ ಕಡೆಗೆ ಹೊರಟಿದ್ದೇನೆ("Driving home ma... enroute Mumbai," ) ಎಂದು ಬರೆದುಕೊಂಡಿದ್ದಾರೆ.
ಇನ್ನು ತಮ್ಮ ತಂದೆ ರಿಷಿ ಕಪೂರ್ ಅಂತ್ಯಕ್ರಿಯೆಯನ್ನು ವಿಡಿಯೋ ಕಾಲ್ ಮೂಲಕವೇ ರಿದ್ದಿಮಾ ನೆರವೇರಿಸಿದರು. ಇನ್ನು ಫೋಟೋ ಒಂದನ್ನು ಶೇರ್ ಮಾಡಿದ್ದು, ಅಪ್ಪಾ ನಾನು ನಿಮ್ಮನ್ನೂ ತುಂಬಾ ಮಿಸ್ ಮಾಡ್ಕೋತಿದ್ದೇನೆ. ಮರಳಿ ಬನ್ನಿ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ವಿಷಯ ಹೇಳಿರುವ ರಿದ್ದಿಮಾ, ತಮಗೆ ಪ್ರತೀ ದಿನ ರಿಷಿ ಕಪೂರ್ ವಿಡಿಯೋ ಕಾಲ್ ಮಾಡಿ ಮಾತನಾಡಿಸುತ್ತಿದ್ದುದ್ದನ್ನು ಹೇಳಿದ್ದಾರೆ.