ಕರ್ನಾಟಕ

karnataka

ETV Bharat / sitara

ಹ್ಯಾಟ್ರಿಕ್​ ಹೀರೋ ಶಿವಣ್ಣನ 126ನೇ ಚಿತ್ರಕ್ಕೆ 'ಕಿರಿಕ್​​​' ರಿಷಬ್​​ ಶೆಟ್ಟಿ ಡೈರೆಕ್ಷನ್​..! - ಭಜರಂಗಿ 2

ಸ್ಯಾಂಡಲ್​ವುಡ್​ನಲ್ಲಿ ನಿರ್ದೇಶನದ ಜೊತೆಗೆ ನಟನೆಗೆ ಡಿಮ್ಯಾಂಡ್ ಹೆಚ್ಚಿಸಿಕೊಂಡಿರುವ ರಿಷಬ್ ಶೆಟ್ಟಿ ಮತ್ತೆ ಸಿನಿಮಾ ನಿರ್ದೇಶನಕ್ಕೆ ವಾಪಸ್ ಆಗಲಿದ್ದಾರೆ. ಒಂದು ಅಚ್ಚರಿ ವಿಷ್ಯ ಅಂದರೆ, ಶಿವರಾಜ್​ಕುಮಾರ್​ ಅವರ 126ನೇ ಚಿತ್ರಕ್ಕೆ ರಿಷಬ್​ ಶೆಟ್ಟಿ ಆಕ್ಷನ್​ ಕಟ್​ ಹೇಳುತ್ತಿದ್ದಾರೆ‌‌.

rishab-shetty-will-direct-126th-film-of-shivarajkumar
ರಿಷಬ್​​ ಶೆಟ್ಟಿ ಹ್ಯಾಟ್ರಿಕ್​ ಹೀರೋ ಶಿವಣ್ಣ

By

Published : Aug 19, 2021, 5:57 PM IST

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರ ಅಚ್ಚುಮೆಚ್ಚಿನ ಹೀರೋ ಅಂತಾ ಕರೆಯಿಸಿಕೊಂಡಿರುವ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್. ಸದ್ಯ ಭಜರಂಗಿ 2, ವೇದಾ ಹಾಗೂ ಬೈರಾಗಿ, ಹೀಗೆ ಬ್ಯಾಕ್ ಟೂ ಬ್ಯಾಕ್ ಚಿತ್ರಗಳಲ್ಲಿ ಶಿವರಾಜ್ ಕುಮಾರ್ ಬ್ಯುಸಿಯಾಗಿದ್ದಾರೆ. ಎರಡು ದಿನದ ಹಿಂದೆಯಷ್ಟೇ 124 ಚಿತ್ರ 'ನೀ ಸಿಗೋವರೆಗೂ' ಸಿನಿಮಾದ ಮುಹೂರ್ತ ಮುಗಿಸಿದ, ಸೆಂಚುರಿ ಸ್ಟಾರ್ ತಮ್ಮ 126ನೇ ಸಿನಿಮಾ, ಯಾವ ನಿರ್ದೇಶಕನ‌ ಜೊತೆ ಅನ್ನೋದು ಅನೌನ್ಸ್​​​ ಮಾಡಿದ್ದಾರೆ.

ಹ್ಯಾಟ್ರಿಕ್​ ಹೀರೋ ಶಿವಣ್ಣನ 126ನೇ ಚಿತ್ರಕ್ಕೆ 'ಕಿರಿಕ್​​​' ರಿಷಬ್​​ ಶೆಟ್ಟಿ ಡೈರೆಕ್ಷನ್​..!

ಹೌದು ಸ್ಯಾಂಡಲ್​ವುಡ್​ನಲ್ಲಿ ನಿರ್ದೇಶನದ ಜೊತೆಗೆ ನಟನೆಗೆ ಡಿಮ್ಯಾಂಡ್ ಹೆಚ್ಚಿಸಿಕೊಂಡಿರುವ ರಿಷಬ್ ಶೆಟ್ಟಿ ಮತ್ತೆ ಸಿನಿಮಾ ನಿರ್ದೇಶನಕ್ಕೆ ವಾಪಸ್ ಆಗಲಿದ್ದಾರೆ. ಒಂದು ಅಚ್ಚರಿ ವಿಷ್ಯ ಅಂದರೆ, ಶಿವರಾಜ್​ಕುಮಾರ್​ ಅವರ 126ನೇ ಚಿತ್ರಕ್ಕೆ ರಿಷಬ್​ ಶೆಟ್ಟಿ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ‌‌. 'ರಿಕ್ಕಿ', 'ಕಿರಿಕ್​ ಪಾರ್ಟಿ', 'ಸ.ಹಿ.ಪ್ರಾ. ಶಾಲೆ ಕಾಸರಗೋಡು' ಅಂಥಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ರಿಷಬ್​ಗೆ ಹ್ಯಾಟ್ರಿಕ್ ಹೀರೋ ಚಿತ್ರಕ್ಕೆ ನಿರ್ದೇಶನ‌ ಮಾಡುವ ಕಾಲ‌ ಕೂಡಿ ಬಂದಿದೆ.

ಇಂದು ನಿರ್ದೇಶಕ ರಿಷಬ್ ಶೆಟ್ಟಿ ಶಿವರಾಜ್ ಕುಮಾರ್ ಅವ್ರನ್ನ ಭೇಟಿ ಮಾಡಿ, ಸಿನಿಮಾದ ಕಥೆ ಹೇಳಿದ್ದಾರಂತೆ. ರಿಷಬ್ ಶೆಟ್ಟಿ ಹೇಳುವ ಹಾಗೇ, ಶಿವಣ್ಣ ನಟಿಸಿರೋ 'ಓಂ' ಸಿನಿಮಾ ನೋಡಿ, ಅವಾಗ್ಲೇ ಬೋಲ್ಡ್ ಆಗಿದ್ದೆ. ಈಗ ಶಿವಣ್ಣನ ಸಿನಿಮಾಗೆ ನಿರ್ದೇಶನ ಮಾಡುವ ಅವಕಾಶ ಸಿಕ್ಕಿರೋದು ಖುಷಿಯಾಗುತ್ತಿದೆ‌. ಸದ್ಯ ಕಥೆಯನ್ನ ಶಿವಣ್ಣನಿಗೂ ಹೇಳಿದ್ದೀನಿ, ಶಿವಣ್ಣ ಕೂಡ ಥ್ರಿಲ್ ಆಗಿದ್ದಾರೆ ಅಂತಾ ಶೆಟ್ರು ಹೇಳಿದ್ರು.

ಅಷ್ಟೇ ಅಲ್ಲಾ ಶಿವಣ್ಣ, ಇಲ್ಲಿವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ 'ಓಂ' ಸಿನಿಮಾದ ರೀತಿಯ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಕಾಂತಾರ' ಸಿನಿಮಾ ಮುಗಿದ ಮೇಲೆ ಶಿವರಾಜ್ ಕುಮಾರ್ ಜೊತೆಗಿನ ಸಿನಿಮಾ ಸ್ಟಾರ್ಟ್ ಆಗಲಿದೆಯಂತೆ. ಈ ಚಿತ್ರದ ಟೈಟಲ್ ಏನು? ಸಿನಿಮಾದ ನಾಯಕಿ ಯಾರು? ಈ ಚಿತ್ರದಲ್ಲಿ ಯಾರೆಲ್ಲಾ ಆ್ಯಕ್ಟ್​​ ಮಾಡ್ತಾರೆ ಅಂತ ರಿಷಬ್ ಶೆಟ್ಟಿ ಮುಂದಿನ ದಿನಗಳಲ್ಲಿ ತಿಳಿಸಲಿದ್ದಾರಂತೆ.

ಚಿತ್ರವನ್ನು ಜಯಣ್ಣ ಭೋಗೇಂದ್ರ ನಿರ್ಮಾಣ ಮಾಡಲಿದ್ದಾರೆ. ಈಗಾಗಲೇ ರಿಷಬ್ ಶೆಟ್ಟಿ ಜೊತೆಗೆ ನಿರ್ಮಾಪಕ ಜಯಣ್ಣ ಕೂಡ ಶಿವರಾಜ್ ಕುಮಾರ್ ಅವರನ್ನ ಭೇಟಿ ಮಾಡಿ, 126ನೇ ಸಿನಿಮಾದ ಕಥೆ ಫೈನಲ್ ಮಾಡಿದ್ದಾರೆ. ಸದ್ಯ ಎಲ್ಲಾ ಸರ್ಪ್ರೈಸ್​​ ರಿವೀಲ್​ಗಾಗಿ ಅಭಿಮಾನಿಗಳು ಕಾಯಬೇಕಿದೆ.

ABOUT THE AUTHOR

...view details