ಚಂದನವನದಲ್ಲಿ ಬ್ಯುಸಿ ನಟ, ನಿರ್ದೇಶಕರ ಪೈಕಿ ರಿಷಬ್ ಶೆಟ್ಟಿ ಕೂಡ ಒಬ್ರು. ಒಂದಿಲ್ಲೊಂದು ಸಿನಿಮಾದಲ್ಲಿ ನಟಿಸುತ್ತಿರುವ ಶೆಟ್ರು ಸದ್ಯ ಹರಿಕಥೆಯಲ್ಲ ಗಿರಿಕಥೆ ಸಿನಿಮಾ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ.
ಈ ಸೆಟ್ನಲ್ಲಿ ತಮ್ಮ ಹಳೆಯ ಕೆಲಸದ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ. ತಾವು ಸುಮಾರು ಆರೇಳು ವರ್ಷಗಳ ಹಿಂದೆ ನೀರಿನ ಕ್ಯಾನ್ ಹಾಕುವ ಕೆಲಸ ಮಾಡುತ್ತಿದ್ದರಂತೆ. ಇದನ್ನು ನೆನಪಿಸಿಕೊಂಡಿರುವ ರಿಷಬ್ ಶೆಟ್ಟಿ, ಹೆಗಲ ಮೇಲೆ ನೀರಿನ ಕ್ಯಾನ್ ಇಟ್ಟುಕೊಂಡು 'ಈಗೊಂದು ಆರೇಳು ವರ್ಷದ ಹಿಂದೆ ಇದೇ ನಮ್ ಬಿಝಿನೆಸ್ಸು ಎಂದು ಬರೆದಿದ್ದಾರೆ.