ಕರ್ನಾಟಕ

karnataka

ETV Bharat / sitara

'ಹರಿಕಥೆ ಅಲ್ಲ ಗಿರಿಕಥೆ' ಹೇಳೋಕೆ ರೆಡಿಯಾದ ರಿಷಭ್ ಶೆಟ್ಟಿ - Harikathe alla girikathe movie

ನಿರ್ದೇಶನ ಮಾತ್ರವಲ್ಲ ನಟನಾಗಿ ಕೂಡಾ ಹೆಸರು ಮಾಡಿರುವ ರಿಷಭ್ ಶೆಟ್ಟಿ ಇದೀಗ 'ಹರಿಕಥೆ ಅಲ್ಲ ಗಿರಿಕಥೆ' ಎಂಬ ಹೊಸ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಲಾಕ್​ಡೌನ್​ ಸಡಿಲಿಕೆ ಆಗಿ ಸರ್ಕಾರ ಅನುಮತಿ ನೀಡಿದ ಕೂಡಲೇ ಚಿತ್ರೀಕರಣ ಆರಂಭವಾಗಲಿದೆ.

Rishab shetty new movie
ರಿಷಭ್ ಶೆಟ್ಟಿ ಹೊಸ ಸಿನಿಮಾಗೆ ಮುಹೂರ್ತ

By

Published : Jun 20, 2020, 5:48 PM IST

ನಿರ್ದೇಶಕ ರಿಷಭ್​​​​​​​ ಶೆಟ್ಟಿ 'ಬೆಲ್ ಬಾಟಮ್' ಚಿತ್ರದ ನಂತರ ನಟರಾಗಿಯೂ ಸಖತ್ ಬ್ಯುಸಿ ಆಗಿದ್ದಾರೆ. ನಾಥೂರಾಮ್, ಅ್ಯಂಟಿಗೋನಿ ಶೆಟ್ಟಿ, ಮಹಿಳೆಯರೆ ಮತ್ತು ಮಹನಿಯರೆ, ಕೌ ಬಾಯ್ ಕೃಷ್ಣ, ಬೆಲ್ ಬಾಟಮ್ 2 ಹೀಗೆ ಸಾಲು ಸಾಲು ಚಿತ್ರಗಳಲ್ಲಿ ರಿಷಭ್​​​​​​​​​ ನಾಯಕನಾಗಿ ನಟಿಸುತ್ತಿದ್ದಾರೆ.

ರಿಷಭ್ ಶೆಟ್ಟಿ ಹೊಸ ಸಿನಿಮಾಗೆ ಮುಹೂರ್ತ

ಈ ಚಿತ್ರಗಳೊಂದಿಗೆ ರಿಷಭ್ ಶೆಟ್ಟಿ ಹರಿಕಥೆ ಹೇಳೋಕೆ ಕೂಡಾ ರೆಡಿಯಾಗಿದ್ದಾರೆ. ಶೆಟ್ರು ಈಗ 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರದ ನಾಯಕನಾಗಿ ನಟಿಸುತ್ತಿದ್ದು, ಈ ಚಿತ್ರ ಸದ್ದಿಲ್ಲದೆ ಸೆಟ್ಟೇರಿದೆ. ಸಂದೇಶ್ ಪ್ರೊಡಕ್ಷನ್ಸ್ ಹಾಗೂ ರಿಷಬ್ ಶೆಟ್ಟಿ ಫಿಲಂಸ್ ಸಹಭಾಗಿತ್ವದಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ವಿಶೇಷ ಅಂದ್ರೆ ಶೆಟ್ರು ಹೊಸ ಚಿತ್ರಕ್ಕೆ ಜ್ಯೂನಿಯರ್ ಶೆಟ್ರು, ಮಾಸ್ಟರ್ ರಣವೀತ್ ಶೆಟ್ಟಿ ಆರಂಭ ಫಲಕ ತೋರುವ ಮೂಲಕ ಅಪ್ಪನ ಹೊಸ ಚಿತ್ರಕ್ಕೆ ಚಾಲನೆ ನೀಡಿದ್ದಾನೆ. ಈ ವೇಳೆ ರಕ್ಷಿತ್ ಶೆಟ್ಟಿ ಕೂಡಾ ಹಾಜರಿದ್ದರು.

ರಿಷಭ್ ಶೆಟ್ಟಿ ಹೊಸ ಸಿನಿಮಾಗೆ ಮುಹೂರ್ತ

ಈ ಚಿತ್ರವನ್ನು 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ನಟಿಸಿದ್ದ ಗಿರಿಕೃಷ್ಣ ನಿರ್ದೇಶಿಸಿದ್ಧಾರೆ. ನಿರ್ದೇಶಕನಾಗಿ ಇದು ಗಿರಿಕೃಷ್ಣ ಅವರ ಮೊದಲ ಪ್ರಯತ್ನ . ಮೂಲತಃ ನಟರಾಗಿದ್ದ ಗಿರಿಕೃಷ್ಣ, ಈಗ ಡೈರೆಕ್ಟರ್ ಟೋಪಿ ತೊಡಲು ಸಿದ್ಧರಾಗಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. 'ಕಥಾ ಸಂಗಮ' ಚಿತ್ರದಲ್ಲಿ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸಿದ್ದ ರಂಗನಾಥ್ ಸಿ.ಎಂ. ಛಾಯಾಗ್ರಹಣ ಈ ಚಿತ್ರಕ್ಕೆ ಇದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗವನ್ನು ಸದ್ಯದಲ್ಲೇ ಚಿತ್ರತಂಡ ಘೋಷಿಸಲಿದೆ. ಸರ್ಕಾರ ಅನುಮತಿ ನೀಡಿದ ಕೂಡಲೇ ಶೂಟಿಂಗ್ ಆರಂಭಿಸಲು ಚಿತ್ರರಂಗ ಸಕಲ ಸಿದ್ಧತೆ ಮಾಡಿಕೊಂಡಿದೆ.

ರಿಷಭ್ ಶೆಟ್ಟಿ ಹೊಸ ಸಿನಿಮಾಗೆ ಮುಹೂರ್ತ

ABOUT THE AUTHOR

...view details