ಕರ್ನಾಟಕ

karnataka

ETV Bharat / sitara

'ಹರಿಕಥೆ ಅಲ್ಲ ಗಿರಿಕಥೆ' ಚಿತ್ರದ‌‌ 2ನೇ ಹಂತದ ಚಿತ್ರೀಕರಣ ಆರಂಭ! - harikathe alla girikathe cinema shooting

ಧರಣಿ ಗಂಗೆಪುತ್ರ ಚಿತ್ರದ ನಿರ್ಮಾಣ ವಿನ್ಯಾಸಕರಾಗಿದ್ದು, ಪ್ರಮೋದ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ರಿಷಬ್ ಶೆಟ್ಟಿ ಫಿಲಂಸ್ ಸಹಯೋಗದೊಂದಿಗೆ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ‌..

rishab
ಹರಿಕಥೆ ಅಲ್ಲ ಗಿರಿಕಥೆ

By

Published : Dec 30, 2020, 6:42 AM IST

'ಹರಿಕಥೆ ಅಲ್ಲ ಗಿರಿಕಥೆ' ಸ್ಯಾಂಡಲ್​​ವುಡ್​​ನಲ್ಲಿ ಶೀರ್ಷಿಕೆಯಿಂದಲೇ ಸದ್ದು ಮಾಡ್ತಿರೋ ಸಿನಿಮಾ. ನಿರ್ದೇಶಕ ಕಮ್​ ನಟ ರಿಷಬ್ ಶೆಟ್ಟಿ, ರಚನಾ ಇಂದರ್ ಅಭಿನಯಿಸುತ್ತಿರೋ ಹರಿಕಥೆ ಅಲ್ಲ ಗಿರಿಕಥೆ ಚಿತ್ರವನ್ನು ಕರಣ್ ಅನಂತ್ ಹಾಗೂ‌ ಅನಿರುದ್ಧ್ ಮಹೇಶ್ ಜಂಟಿಯಾಗಿ ನಿರ್ದೇಶಿಸುತ್ತಿದ್ದಾರೆ.

ಶೀರ್ಷಿಕೆಯಿಂದಲೇ ಸದ್ದು ಮಾಡ್ತಿರೋ ಸಿನಿಮಾ

ಅಕ್ಟೋಬರ್ 1ರಿಂದ ಡಿಸೆಂಬರ್ 20ರವರೆಗೂ ಮೈಸೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ನಡೆದಿದೆ. ಡಿಸೆಂಬರ್ 26ರಿಂದ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ, ಜನವರಿ 2ರಿಂದ ಗೋವಾದಲ್ಲಿ, ಆನಂತರ ಮಡಿಕೇರಿಯಲ್ಲಿ ದ್ವಿತೀಯ ಹಂತದ ಚಿತ್ರೀಕರಣ ನಡೆಯಲಿದೆ. ರಿಷಬ್ ಶೆಟ್ಟಿ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ತಪಸ್ವಿನಿ ಪೊನ್ನಚ್ಚ, ಹೊನ್ನವಳ್ಳಿ ಕೃಷ್ಣ, ಪ್ರಮೋದ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.

ರಿಷಬ್​ ಶೆಟ್ಟಿ ಅಭಿನಯದ ಹರಿಕಥೆ ಅಲ್ಲ ಗಿರಿಕಥೆ

ಅನಿರುದ್ಧ್ ಮಹೇಶ್, ಕರಣ್ ಅನಂತ್ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಅನಿರುದ್ಧ್ ಮಹೇಶ್ ಮಾತು ಬರೆದಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ, ಚಂದ್ರಶೇಖರನ್, ರಂಗನಾಥ್ ಸಿ ಎಂ ಛಾಯಾಗ್ರಹಣ, ಪ್ರಗತಿ ರಿಷಬ್ ಶೆಟ್ಟಿ ವಸ್ತ್ರ ವಿನ್ಯಾಸ ಹಾಗೂ ರಿತ್ವಿಕ್ ಅವರ ಸಂಕಲನ ಈ ಚಿತ್ರಕ್ಕಿದೆ.

ಧರಣಿ ಗಂಗೆಪುತ್ರ ಚಿತ್ರದ ನಿರ್ಮಾಣ ವಿನ್ಯಾಸಕರಾಗಿದ್ದು, ಪ್ರಮೋದ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ರಿಷಬ್ ಶೆಟ್ಟಿ ಫಿಲಂಸ್ ಸಹಯೋಗದೊಂದಿಗೆ ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ‌.

ಹರಿಕಥೆ ಅಲ್ಲ ಗಿರಿಕಥೆ ಸಿನಿಮಾ

ABOUT THE AUTHOR

...view details