ಕರ್ನಾಟಕ

karnataka

ETV Bharat / sitara

ಆನೆಗುಡ್ಡ ವಿನಾಯಕ ದೇವಸ್ಥಾನದಲ್ಲಿ ಸೆಟ್ಟೇರಿದ 'ಕಾಂತಾರ' - ಸಪ್ತಮಿ ಗೌಡ

ನಿರ್ದೇಶಕ ಹಾಗು ನಟ‌ ರಿಷಬ್ ಶೆಟ್ಟಿ ಅಭಿನಯದ ಮತ್ತು ಹೊಂಬಾಳೆ ಫಿಲಂಸ್​ನ 11ನೇ ಚಿತ್ರ 'ಕಾಂತಾರ' ಸಿನಿಮಾ ಆನೆಗುಡ್ಡದ ವಿನಾಯಕ ದೇವಸ್ಥಾನದಲ್ಲಿ ಸೆಟ್ಟೇರಿತು.

Rishab Shetty
ಕಾಂತಾರ ಸಿನಿಮಾ ಸೆಟ್ಟೇರಿದ ಕ್ಷಣ

By

Published : Aug 28, 2021, 10:55 AM IST

ಬೆಂಗಳೂರು/ಉಡುಪಿ: ಪ್ಯಾನ್​ ಇಂಡಿಯಾ ಸಿನಿಮಾ ಸೇರಿದಂತೆ ಕನ್ನಡ ಚಿತ್ರಗಳನ್ನು ಪ್ರಕಟಿಸುತ್ತಿರುವ ಕನ್ನಡ ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್​ನ 11ನೇ ಚಿತ್ರ 'ಕಾಂತಾರ' ಸಿನಿಮಾ ಕುಂಭಾಶಿಯ ಆನೆಗುಡ್ಡದ ವಿನಾಯಕ ದೇವಸ್ಥಾನದಲ್ಲಿ ಸೆಟ್ಟೇರಿದೆ.

ನಿರ್ಮಾಪಕ ವಿಜಯ್ ಕಿರಗಂದೂರು ಮಾಲೀಕತ್ವದ ಈ ಸಂಸ್ಥೆ ಬ್ಯಾಕ್ ಟು ಬ್ಯಾಕ್ ಹೊಸ ಸಿನಿಮಾಗಳನ್ನು ಮಾಡುತ್ತಿದೆ. ರಿಷಬ್​​ ಶೆಟ್ಟಿ ಹೊಂಬಾಳೆ ಫಿಲಂಸ್​ ನಿರ್ಮಾಣದಲ್ಲಿ ನಟಿಸುತ್ತಿರುವ 'ಕಾಂತಾರ' ಸಿನಿಮಾಕ್ಕೆ ವಿಜಯ್ ಕಿರಗಂದೂರು ಸಹೋದರ ಮಂಜುನಾಥ್ ಮೊದಲ ಸನ್ನಿವೇಶಕ್ಕೆ ಕ್ಲಾಪ್ ಮಾಡಿದರು. ಕುಂದಾಪುರದ ಯುವ ಗ್ರೂಪ್ಸ್​ನ ಅಧ್ಯಕ್ಷ ಉದಯ್ ಶೆಟ್ಟಿ ಕ್ಯಾಮೆರಾಗೆ ಚಾಲನೆ ನೀಡಿದರು.

ಕಾಂತಾರ ಸಿನಿಮಾ ಸೆಟ್ಟೇರಿದ ಕ್ಷಣ

ಈ ಚಿತ್ರವನ್ನ ನಿರ್ದೇಶಕ ಹಾಗು ನಟ‌ ರಿಷಬ್ ಶೆಟ್ಟಿ ನಿರ್ದೇಶಿಸುತ್ತಿದ್ದು, ಅವರೇ ನಾಯಕನ ಪಾತ್ರ ನಿರ್ವಹಿಸುತ್ತಿದ್ದಾರೆ. ರಿಷಬ್​ಗೆ ಜೋಡಿಯಾಗಿ ಸಪ್ತಮಿ ಗೌಡ ನಟಿಸುತ್ತಿದ್ದು, ಜೊತೆಗೆ ಅಚ್ಯುತ ಕುಮಾರ್, ಕಿಶೋರ್ ಕುಮಾರ್ ಹಾಗೂ ಪ್ರಮೋದ್ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕಾಂತಾರ ಸಿನಿಮಾ ಸೆಟ್ಟೇರಿದ ಕ್ಷಣ

ಸದ್ಯಕ್ಕೆ ಅನಾವರಣಗೊಂಡಿರುವ 'ಕಾಂತಾರ' ಚಿತ್ರದ ಪೋಸ್ಟರ್ ನೋಡಿದ್ರೆ ಮಂಗಳೂರಿನ ಕಂಬಳ ಓಟದ ಕಥೆ ಇರಬಹುದು ಎಂದು ಅಂದಾಜಿಸಲಾಗಿದೆ. ಮತ್ತೊಂದೆಡೆ‌ ಮನುಷ್ಯ ಮತ್ತು ಪರಿಸರದ ಕಥೆಯನ್ನ 'ಕಾಂತಾರ' ಒಳಗೊಂಡಿದೆ ಎನ್ನಲಾಗುತ್ತಿದೆ.

ಕಾಂತಾರ ಸಿನಿಮಾ ಸೆಟ್ಟೇರಿದ ಕ್ಷಣ

ಈ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಅರವಿಂದ್ ಕಶ್ಯಪ್ ಛಾಯಾಗ್ರಹಣವಿದ್ದು, ಚಿತ್ರದ ಪ್ರಚಾರ ನಿರ್ವಹಣೆ KRG ಕನೆಕ್ಟ್ಸ್ ವಹಿಸಿಕೊಂಡಿದೆ. ಮಂಗಳೂರಿನ ಕೆರಾಡಿ ಮತ್ತು ಹೆಮ್ಮಾಡಿ ಸುತ್ತಮುತ್ತ ಚಿತ್ರೀಕರಣ ಮಾಡಲು ತೀರ್ಮಾನಿಸಿದ್ದು, ಎಲ್ಲಾ ಅಂದುಕೊಂಡಂತೆ ನಡೆದರೆ ಈ ವರ್ಷದ ಅಂತ್ಯದೊಳಗೆ 'ಕಾಂತಾರ' ಚಿತ್ರೀಕರಣ ಮುಗಿಸಲು ಚಿತ್ರತಂಡ ಪ್ಲಾನ್ ಮಾಡಿದೆ‌.

ಕಾಂತಾರ ಸಿನಿಮಾ ಸೆಟ್ಟೇರಿದ ಕ್ಷಣ

ABOUT THE AUTHOR

...view details