ಕಳೆದ ವರ್ಷ ಲಾಕ್ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇದ್ದ ರಿಷಬ್, ಸದ್ದಿಲ್ಲದೆ ಒಂದು ಕಥೆ ಮಾಡಿಟ್ಟುಕೊಂಡು ಲಾಕ್ಡೌನ್ ಮುಗಿಯುತ್ತಿದ್ದಂತೆಯೇ ಅದನ್ನು ಸಿನಿಮಾ ಮಾಡಿದ್ದರು, ಅದೇ ಹೀರೋ. ಈ ಬಾರಿ ಸಹ ರಿಷಬ್ ಅದನ್ನೇ ರಿಪೀಟ್ ಮಾಡುತ್ತಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಹೇಳೋಕೊಂದು ಕಥೆ ಸಿಕ್ಕಾಯ್ತು. ಇನ್ನು ಮಾಡೋದೊಂದೇ ಬಾಕಿ. ನಿಮ್ಮೆಲ್ಲರ ಪ್ರೀತಿ ಇರಲಿ. ಬ್ಯಾಕ್ ಟು ಡೈರೆಕ್ಷನ್ ಎಂದು ಹೇಳಿಕೊಂಡಿದ್ದಾರೆ. ಕಳೆದ ಬಾರಿ ರಿಷಬ್ ಬರೀ ನಿರ್ಮಾಣ ಮತ್ತು ನಟನೆ ಮಾತ್ರ ಮಾಡಿದ್ದರು. ಈ ಬಾರಿ ಅವರು ನಿರ್ದೇಶನಕ್ಕೆ ವಾಪಸ್ಸಾಗುತ್ತಿರುವುದು ವಿಶೇಷ. 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ' ಚಿತ್ರದ ನಂತರ ರಿಷಭ್ ನಿರ್ದೇಶನ ಮಾಡಿರಲಿಲ್ಲ. ಬರೀ ನಟನೆಯಲ್ಲೇ ಬ್ಯುಸಿಯಾಗಿದ್ದ ಅವರು, ಇದೀಗ ಈ ಹೊಸ ಚಿತ್ರದೊಂದಿಗೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ.