ನಟ, ನಿರ್ದೇಶಕ ರಿಷಭ್ ಶೆಟ್ಟಿ ಇದೀಗ ಗಂಡು ಮಗುವಿನ ತಂದೆ. ಹೌದು, ಇಂದು ಬೆಳಗ್ಗೆ ರಿಷಭ್ ಪತ್ನಿ ಪ್ರಗತಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಗಂಡುಮಗುವಿಗೆ ಜನ್ಮ ಕೊಟ್ಟರು.
ಗಂಡು ಮಗುವಿನ ತಂದೆಯಾದ್ರು 'ಡಿಟೆಕ್ಟಿವ್ ದಿವಾಕರ್'! ಸಂತಸದ ಸುದ್ದಿ ಹಂಚಿಕೊಂಡರು ರಿಷಭ್ - ಪ್ರಗತಿ ಶೆಟ್ಟಿ
'ಬೆಲ್ಬಾಟಮ್' ಹೀರೋ ರಿಷಭ್ ಇದೀಗ ಮತ್ತೊಬ್ಬ ಹೀರೋಗೆ ತಂದೆಯಾಗಿದ್ದಾರೆ. ರಿಷಭ್ ಪತ್ನಿ ಪ್ರಗತಿ ಗಂಡುಮಗುವಿಗೆ ಜನ್ಮ ನೀಡಿದ್ದು 'Yes. it's a Hero' ಎಂಬ ಕ್ಯಾಪ್ಷನ್ ಜೊತೆಗೆ ತಮ್ಮ ಹಾಗೂ ಪತ್ನಿ ಪೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
![ಗಂಡು ಮಗುವಿನ ತಂದೆಯಾದ್ರು 'ಡಿಟೆಕ್ಟಿವ್ ದಿವಾಕರ್'! ಸಂತಸದ ಸುದ್ದಿ ಹಂಚಿಕೊಂಡರು ರಿಷಭ್](https://etvbharatimages.akamaized.net/etvbharat/images/768-512-2930017-thumbnail-3x2-rishabh.jpg)
ಮೂಲತ: ಉಡುಪಿಯವರಾದ ಪ್ರಗತಿ, ಶಿವಮೊಗ್ಗದಲ್ಲಿ ಓದಿ IBM ಕಂಪನಿಯಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. 2,017 ಫೆಬ್ರವರಿ 9 ರಂದು ರಿಷಭ್ ಹಾಗೂ ಪ್ರಗತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವತ್ತು ವಿಜಯನಗರದ ಆಸ್ಪತ್ರೆಯೊಂದರಲ್ಲಿ ಪ್ರಗತಿ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪತ್ನಿ ಜೊತೆ ಸೆಲ್ಫಿ ಫೊಟೋ ತೆಗೆದು ಸಂತೋಷದ ಸುದ್ದಿಯನ್ನು ರಿಷಭ್ ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡರು. ಜ್ಯೂನಿಯರ್ ರಿಷಭ್ ಆಗಮನದ ಸುದ್ದಿ ತಿಳಿದ ಅಕುಲ್ ಬಾಲಾಜಿ, ಅಜನೀಶ್ ಲೋಕನಾಥ್, ಸಿಂಪಲ್ ಸುನಿ, ಕಾರ್ತಿಕ್ಗೌಡ ಸೇರಿ ಇನ್ನಿತರ ಚಿತ್ರರಂಗದ ಸ್ನೇಹಿತರು ಶುಭ ಕೋರಿದ್ದಾರೆ.