'ಗರುಡ ಗಮನ ವೃಷಭ ವಾಹನ' ಸ್ಯಾಂಡಲ್ವುಡ್ನಲ್ಲಿ ಬಹಳ ಸುದ್ದಿಯಲ್ಲಿರುವ ಸಿನಿಮಾ. ಮಂಗಳೂರಿನ ಇಬ್ಬರು ಪ್ರತಿಭೆಗಳು ಒಟ್ಟಿಗೆ ನಟಿಸುತ್ತಿರುವ ಸಿನಿಮಾ ಇದು. ನಿರ್ದೇಶಕ ಕಮ್ ನಟರಾದ ರಿಶಭ್ ಶೆಟ್ಟಿ ಹಾಗೂ 'ಒಂದು ಮೊಟ್ಟೆಯ ಕಥೆ' ಖ್ಯಾತಿಯ ರಾಜ್.ಬಿ ಶೆಟ್ಟಿ ನಟಿಸುತ್ತಿರುವ ಸಿನಿಮಾ ಇದು.
'ಗರುಡ ಗಮನ ವೃಷಭ ವಾಹನ' ಹೊಸ ಪೋಸ್ಟರ್ ಬಿಡುಗಡೆ - ಒಟ್ಟಿಗೆ ನಟಿಸುತ್ತಿರುವ ರಿಷಭ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ
'ಗರುಡ ಗಮನ ವೃಷಭ ವಾಹನ' ಚಿತ್ರದ ಮತ್ತೊಂದು ಪೋಸ್ಟರ್ ರಿವೀಲ್ ಆಗಿದೆ. ಆರು ಹುಲಿಗಳ ತಲೆ ಹೊಂದಿರುವ ಪೋಸ್ಟರ್ ಇದಾಗಿದ್ದು ಇದನ್ನು ನೋಡಿದರೆ, ಚಿತ್ರದ ಮೇಲೆ ಮತ್ತಷ್ಟು ಕ್ಯೂರಿಯಾಸಿಟಿ ಹೆಚ್ಚಾಗಿದೆ. ಪೋಸ್ಟರ್ ಮೇಲೆ 'ಮಂಗಳಾದೇವಿ ಫ್ರೆಂಡ್ಸ್ (ರಿ) ಮಂಗಳೂರು ಮೊದಲನೆ ವರ್ಷದ ಶಾರದಾ ಹುಲಿ' ಎಂದು ಬರೆಯಲಾಗಿದೆ.
!['ಗರುಡ ಗಮನ ವೃಷಭ ವಾಹನ' ಹೊಸ ಪೋಸ್ಟರ್ ಬಿಡುಗಡೆ Garuda gamana Vrushbha vahana new poster out](https://etvbharatimages.akamaized.net/etvbharat/prod-images/768-512-6363466-thumbnail-3x2-rishab.jpg)
ಸದ್ಯ ಶೀರ್ಷಿಕೆ ಹಾಗೂ ಪೋಸ್ಟರ್ನಿಂದಲೇ ಸಿನಿಮಾ ಗಮನ ಸೆಳೆಯುತ್ತಿದೆ. ಇದೀಗ ಚಿತ್ರದ ಮತ್ತೊಂದು ಪೋಸ್ಟರ್ ರಿವೀಲ್ ಆಗಿದೆ. ಕೆಲವು ದಿನಗಳ ಹಿಂದೆ ರಿಷಬ್ ಶೆಟ್ಟಿ ಮತ್ತು ರಾಜ್ .ಬಿ ಶೆಟ್ಟಿ ಇಬ್ಬರ ಅರ್ಧ ಮುಖ ಭಾಗದ ಪೋಸ್ಟರ್ ರಿಲೀಸ್ ಮಾಡಿ ತಲೆಗೆ ಹುಳ ಬಿಟ್ಟಿದ್ದರು. ರಾಜ್ .ಬಿ ಶೆಟ್ಟಿ ನಿರ್ದೇಶನದ ಜೊತೆಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ನಿರ್ದೇಶಕ ರಿಷಭ್ ಶೆಟ್ಟಿ ಕೂಡಾ ಈ ಸಿನಿಮಾದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುತ್ತಿದ್ದಾರೆ.ಇದೀಗ ಮಂಗಳೂರಿನ ಪ್ರಸಿದ್ಧ ಹುಲಿಯಾಟದ ಪೋಸ್ಟರ್ವೊಂದು ರಿವೀಲ್ ಆಗಿದೆ.
ಆರು ಹುಲಿಗಳ ತಲೆ ಹೊಂದಿರುವ ಪೋಸ್ಟರ್ ಇದಾಗಿದ್ದು ಇದನ್ನು ನೋಡಿದರೆ, ಚಿತ್ರದ ಮೇಲೆ ಮತ್ತಷ್ಟು ಕ್ಯೂರಿಯಾಸಿಟಿ ಹೆಚ್ಚಾಗಿದೆ. ಪೋಸ್ಟರ್ ಮೇಲೆ 'ಮಂಗಳಾದೇವಿ ಫ್ರೆಂಡ್ಸ್ (ರಿ) ಮಂಗಳೂರು ಮೊದಲನೆ ವರ್ಷದ ಶಾರದಾ ಹುಲಿ' ಎಂದು ಬರೆಯಲಾಗಿದೆ. ಲೈಟರ್ ಬುದ್ಧ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. ಮಿಥುನ್ ಮುಕುಂದನ್ ಈ ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಪೋಸ್ಟರ್ನಲ್ಲಿ ಉಲ್ಲೇಖಿಸಿರುವಂತೆ ಜೂನ್ 20 ರಂದು ಸಿನಿಮಾವನ್ನು ತೆರೆಗೆ ತರುವ ಪ್ಲ್ಯಾನ್ನಲ್ಲಿದ್ದಾರೆ ರಾಜ್.ಬಿ ಶೆಟ್ಟಿ.