ರೈತ ಪ್ರತಿಭಟನೆ ಪರ ಟ್ವೀಟ್ ಮಾಡಿ "ನಾವ್ಯಾಕೆ ಈ ಬಗ್ಗೆ ಮಾತನಾಡಬಾರದು" ಎಂದಿದ್ದ ಪಾಪ್ ಗಾಯಕಿ ರಿಹನ್ನಾ ವಿವಾದಕ್ಕೆ ಕಾರಣರಾಗಿದ್ದರು. ನಮ್ಮ ದೇಶದ ಸಮಸ್ಯೆ ಬಗ್ಗೆ ನಾವೇ ಪರಿಹಾರ ಕಂಡುಕೊಳ್ಳುತ್ತೇವೆ, ಹೊರಗಿನವರು ಮಧ್ಯಪ್ರವೇಶಿಸುವುದು ಬೇಡ ಎಂದು ಕೆಲವುರು ಗುಡುಗಿದ್ದರು. ಆದರೀಗ ರಿಹನ್ನಾ ಮತ್ತೆ ವಿವಾದಕ್ಕೆ ಕಾರಣರಾಗಿದ್ದು, ಗಣೇಶ ದೇವರ ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಟಾಪ್ಲೆಸ್ ಮಧ್ಯೆ ಗಣೇಶ: ನೆಟ್ಟಿಗರಿಗೆ ಆಹಾರವಾದ ರಿಹನ್ನಾ - ರಿಹನ್ನಾ ಸುದ್ದಿ
ರಿಹನ್ನಾ ಟ್ವಿಟರ್ನಲ್ಲಿ ಒಂದು ಫೋಟೋ ಶೇರ್ ಮಾಡಿದ್ದು, ಗಾಯಕಿ ಗುಲಾಬಿ ಬಣ್ಣದ ಚಡ್ಡಿ ಮತ್ತು ವಜ್ರದಿಂದ ಮಾಡಿರುವ ಗಣೇಶನ ಹಾರವನ್ನು ಧರಿಸಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಗರಂ ಆಗಿದ್ದು, ಹಿಂದೂ ದೇವತೆಗಳನ್ನು ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಾಪ್ಲೆಸ್ ಮಧ್ಯೆ ಗಣೇಶ : ನೆಟ್ಟಿಗರಿಗೆ ಆಹಾರವಾದ ರಿಹನ್ನಾ
ರಿಹನ್ನಾ ಟ್ವಿಟರ್ನಲ್ಲಿ ಒಂದು ಫೋಟೋ ಶೇರ್ ಮಾಡಿದ್ದು, ಗಾಯಕಿ ಗುಲಾಬಿ ಬಣ್ಣದ ಚಡ್ಡಿ ಮತ್ತು ವಜ್ರದಿಂದ ಮಾಡಿರುವ ಗಣೇಶನ ಹಾರ ಧರಿಸಿದ್ದಾರೆ. ಈ ಫೋಟೋ ನೋಡಿದ ನೆಟ್ಟಿಗರು ಗರಂ ಆಗಿದ್ದು, ಹಿಂದೂ ದೇವತೆಗಳನ್ನು ಅವಮಾನಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಮೆಂಟ್ಗಳನ್ನು ಮಾಡುತ್ತಿರುವ ನೆಟ್ಟಿಗರು, ನಮ್ಮ ಧರ್ಮವನ್ನು ನಿಮ್ಮ ಸೌಂದರ್ಯಕ್ಕಾಗಿ ಬಳಸುವುದನ್ನು ನಿಲ್ಲಿಸಿ ಎಂದು ಒತ್ತಾಯಿಸಿದ್ದಾರೆ.