ಕನ್ನಡ ಚಿತ್ರರಂಗದಲ್ಲಿ ಸಿನಿಮಾ ಶೀರ್ಷಿಕೆಗಳ ಬಗ್ಗೆ ಆಗ್ಗಾಗ್ಗೆ ಗೊಂದಲ ಉಂಟಾಗುವುದು ಸಹಜ. 2018 ರಲ್ಲಿ ಚಿತ್ರೀಕರಣ ಆರಂಭಿಸಿ ಈಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ 'ರಿಚ್ಚಿ' ಹೆಸರಿನ ಸಿನಿಮಾ ಟೈಟಲ್ ಬಗ್ಗೆ ಕೂಡಾ ಇದೀಗ ಗೊಂದಲ ಶುರುವಾಗಿದೆ. ಮಾರುತಿ ಮೂವಿ ಮೇಕರ್ಸ್ ಬ್ಯಾನರ್ ಅಡಿ ಈ ಚಿತ್ರವನ್ನು ತಯಾರಿಸಲಾಗಿದೆ.
ಚಿತ್ರಕ್ಕೆ ಶುಭ ಕೋರಿದ ಚಿನ್ನಿ ಪ್ರಕಾಶ್ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯಿಸಿದ್ದ 'ಉಳಿದವರು ಕಂಡಂತೆ' ಚಿತ್ರದಲ್ಲಿ ರಕ್ಷಿತ್ ಹೆಸರು ರಿಚ್ಚಿ ಆಗಿತ್ತು. ನಂತರ ಅದೇ ಹೆಸರಿನಲ್ಲಿ 2014 ರಲ್ಲಿ ಸಿನಿಮಾ ಬಿಡುಗಡೆಯಾಗಿತ್ತು. ಈ 'ರಿಚ್ಚಿ' ಎಂಬ ಹೆಸರಿನಲ್ಲಿ ಫಿಲ್ಮ್ ಚೇಂಬರ್ನಲ್ಲಿ ರಿಚ್ಚಿ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಶೀರ್ಷಿಕೆಯನ್ನು ರಿಜಿಸ್ಟರ್ ಮಾಡಿರಲಿಲ್ಲ. ಆದರೆ 2018ರಲ್ಲಿ ಹೇಮಂತ್ ಕುಮಾರ್ ಎಂಬುವವರು ತಮ್ಮ ಹೆಸರನ್ನು ರಿಚ್ಚಿ ಎಂದು ಬದಲಿಸಿಕೊಂಡು ಅದೇ ಹೆಸರಿನಲ್ಲಿ ಸಿನಿಮಾ ಮಾಡಲು ಆರಂಭಿಸಿದಾಗಲೇ ರಿಚ್ಚಿ ಟೈಟಲ್ ಬಗ್ಗೆ ಸಮಸ್ಯೆ ಆರಂಭವಾಯ್ತು.
'ರಿಚ್ಚಿ' ನಾಯಕ ಹೇಮಂತ್, ನಾಯಕಿ ನಿಷ್ಕಳ ಈ ವಿಚಾರವಾಗಿ ರಿಚ್ಚಿ ಆಗ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿದ್ದ ಎಸ್.ಎ. ಚಿನ್ನೇ ಗೌಡ ಅವರಿಗೆ ಒಂದು ಮನವಿ ಪತ್ರ ನೀಡಿದ್ದರು. ಲಾಕ್ಡೌನ್ನಿಂದ ಬಾಕಿ ಉಳಿದಿದ್ದ ಚಿತ್ರೀಕರಣವನ್ನು ರಿಚ್ಚಿ ಅಲಿಯಾಸ್ ಹೇಮಂತ್ ಕುಮಾರ್ ಈಗ ಪೂರ್ಣಗೊಳಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಆರಂಭಿಸಿದ್ದಾರೆ. ಆದರೆ ಇದೀಗ ಪುಷ್ಕರ್ ಮಲ್ಲಿಕಾರ್ಜುನಯ್ಯ ಆ ಟೈಟಲ್ ನಮ್ಮದು ಎಂದು ಹೇಳುತ್ತಿದ್ದಾರೆ. ಆದರೆ ಇದು ಯಾವ ರೀತಿ ತೀರ್ಮಾನ ಆಗುವುದೋ ಕಾದು ನೋಡಬೇಕು.
ಸೋನು ನಿಗಮ್ ಜೊತೆ ಹೇಮಂತ್ ಕುಮಾರ್ ಬೆಂಗಳೂರಿನಲ್ಲಿ ಡಿಪ್ಲೋಮಾ ಪದವಿ ಪಡೆದಿರುವ ಹೇಮಂತ್, ರಿಚ್ಚಿ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ ನಟಿಸಿದ್ದಾರೆ. ಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್, ಚಿತ್ರದ ಮೂರು ಹಾಡುಗಳಿಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಸೋನು ನಿಗಮ್, ಕುನಾಲ್ ಗಾಂಜವಾಲ ಅಂತಹ ದೊಡ್ಡ ಗಾಯಕರು ಹಾಡುಗಳನ್ನು ಹಾಡಿದ್ದಾರೆ. ರಿಚ್ಚಿ ಹಾಗೂ ಸ್ನೇಹಿತರು ಸೇರಿ ತಯಾರಿಸಿರುವ ಈ ಚಿತ್ರವನ್ನು ಬೆಂಗಳೂರು ಹಾಗೂ ಮಡಿಕೇರಿಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.
ಚಿನ್ನೇಗೌಡ ಅವರಿಗೆ ಮನವಿ ಪತ್ರ ನೀಡುತ್ತಿರುವ ಹೇಮಂತ್ ಕುಮಾರ್ ನಾಯಕ ರಿಚ್ಚಿ ಈ ಚಿತ್ರದಲ್ಲಿ ಪ್ರೆಸ್ ರಿಪೋರ್ಟರ್ ಪಾತ್ರ ನಿರ್ವಹಿಸಿದ್ದಾರೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥಾ ವಸ್ತು ಹೊಂದಿರುವ ಚಿತ್ರದ ಹಾಡೊಂದನ್ನು ರಿಚ್ಚಿ ಶೀಘ್ರದಲ್ಲೇ ಬಿಡುಗಡೆ ಮಾಡಲಿದ್ದಾರೆ. ರಿಚ್ಚಿ ಚಿತ್ರಕ್ಕೆ ವೀರೇಶ್ ಛಾಯಾಗ್ರಹಣ, ಅಗಸ್ತ್ಯ ಸಂತೋಷ್ ಸಂಗೀತ, ಅರ್ಜುನ್ ಕಿಟ್ಟಿ ಸಂಕಲನ, ಪುರುಷೋತ್ತಮ್ ಕಲಾ ನಿರ್ದೇಶಕ, ಸಾಹಸವನ್ನು ವಿಕ್ರಮ್ ನಿರ್ವಹಿಸಿದ್ದಾರೆ. ಪ್ರಕಾಶ್ ರಾವ್ ಈ ಚಿತ್ರದ ಸಹ ನಿರ್ಮಾಪಕರು ರಿಚ್ಚಿ ಜೊತೆ ನಾಯಕಿ ಆಗಿ ನಿಷ್ಕಳ ನಟಿಸಿದ್ದಾರೆ. ಇವರೊಂದಿಗೆ ಮನೋಜ್ ಮಿಶ್ರ, ರಮೇಶ್ ಪಂಡಿತ್, ಮಿಮಿಕ್ರಿ ಗೋಪಿ ಹಾಗೂ ಇತರರು ತಾರಾಗಣದಲ್ಲಿದ್ದಾರೆ.