ಹೈದರಾಬಾದ್:ಟೈಗರ್ ಶ್ರಾಫ್ ಅವರ ಮುಂಬರುವ ಆ್ಯಕ್ಷನ್ ಚಿತ್ರವಾದ ಗಣಪತ್ನಲ್ಲಿ ನಟಿ ಕೃತಿ ಸನನ್ ಟೈಗರ್ ಜೊತೆ ಆಕ್ಷನ್ ಸೀನ್ನಲ್ಲಿ ನಟಿಸುತ್ತಿರುವುದಾಗಿ ನಿರ್ಮಾಪಕರು ಬಹಿರಂಗಪಡಿಸಿದ್ದಾರೆ.
ಚಿತ್ರದಲ್ಲಿ ಕೃತಿ ಸನನ್ ಪಾತ್ರ ಹಾಗೂ ಹೆಸರಿನ ಬಗ್ಗೆ ಜಾಕಿ ಭಗ್ನಾನಿ ಬ್ಯಾನರ್ನ ಪೂಜಾ ಎಂಟರ್ಟೈನ್ಮೆಂಟ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬಹಿರಂಗಗೊಳಿಸಲಾಗಿದೆ. ಚಿತ್ರದಲ್ಲಿ ಕೃತಿ ಜಾಸ್ಸಿ ಎಂಬ ಮಹಿಳೆಯ ಪಾತ್ರಕ್ಕೆ ಬಣ್ಣ ಹಚ್ಚಿರುವುದಾಗಿ ರಿವೀಲ್ ಮಾಡಿದ್ದಾರೆ.