ಸ್ಯಾಂಡಲ್ವುಡ್ ಯುವರಾಜ ಎಂದೇ ಖ್ಯಾತರಾದ ನಿಖಿಲ್ ಕುಮಾರಸ್ವಾಮಿ ಈ ವರ್ಷ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನಿಖಿಲ್ ಮದುವೆ ವಿಜಯನಗರ ಶಾಸಕ ಲೇಔಟ್ ಕೃಷ್ಣಪ್ಪ ಅವರ ಸಂಬಂಧಿ ಮಂಜುನಾಥ್ ಪುತ್ರಿ ರೇವತಿ ಅವರೊಂದಿಗೆ ನಿಶ್ಚಯವಾಗಿದ್ದು ಫೆಬ್ರವರಿ 10 ರಂದು ನಿಶ್ಚಿತಾರ್ಥ ನೆರವೇರಲಿದೆ.
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ನಲ್ಲಿ ಅದ್ಧೂರಿಯಾಗಿ ನೆರವೇರಲಿದೆ ನಿಖಿಲ್-ರೇವತಿ ನಿಶ್ಚಿತಾರ್ಥ - ಅದ್ಧೂರಿಯಾಗಿ ಜರುಗಲಿದೆ ನಿಖಿಲ್ ಕುಮಾರಸ್ವಾಮಿ ನಿಶ್ಚಿತಾರ್ಥ
ಫೆಬ್ರವರಿ 10 ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ಅದ್ಧೂರಿ ನಿಶ್ಚಿತಾರ್ಥಕ್ಕೆ ಮುಹೂರ್ತನಿಗದಿಯಾಗಿದೆ. ನಿಶ್ಚಿತಾರ್ಥದಲ್ಲಿ ನಿಖಿಲ್ ಮತ್ತು ರೇವತಿ ಕುಟುಂಬಸ್ಥರು ಹಾಗೂ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ. ಅಲ್ಲದೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಜನರು ಭಾಗಿಯಾಗುವ ಸಾಧ್ಯತೆ ಇದೆ.

ನಿಖಿಲ್-ರೇವತಿ ನಿಶ್ಚಿತಾರ್ಥ
ಫೆಬ್ರವರಿ 10 ರಂದು ಬೆಂಗಳೂರಿನ ತಾಜ್ ವೆಸ್ಟ್ ಎಂಡ್ನಲ್ಲಿ ಅದ್ಧೂರಿ ನಿಶ್ಚಿತಾರ್ಥಕ್ಕೆ ಮುಹೂರ್ತನಿಗದಿಯಾಗಿದೆ. ನಿಶ್ಚಿತಾರ್ಥದಲ್ಲಿ ನಿಖಿಲ್ ಮತ್ತು ರೇವತಿ ಕುಟುಂಬಸ್ಥರು ಹಾಗೂ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ. ಅಲ್ಲದೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಜನರು ಭಾಗಿಯಾಗುವ ಸಾಧ್ಯತೆ ಇದೆ. ಒಕ್ಕಲಿಗ ಸಂಪ್ರದಾಯದಂತೆ ನಿಖಿಲ್ ಹಾಗೂ ರೇವತಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಇನ್ನು ನಿಖಿಲ್ - ರೇವತಿ ಕಲ್ಯಾಣ ಏಪ್ರಿಲ್‌ನಲ್ಲಿ ನಡೆಯಲಿದ್ದು ನಿಶ್ಚಿತಾರ್ಥದ ನಂತರ ಎರಡೂ ಕುಟುಂಬದವರು ವಿವಾಹಕ್ಕಾಗಿ ಭರ್ಜರಿ ತಯಾರಿ ಮಾಡಿಕೊಳ್ಳಲಿದ್ದಾರೆ.