ಕರ್ನಾಟಕ

karnataka

ETV Bharat / sitara

Doctor's Day.. ಹಗಲಿರುಳು ಶ್ರಮಿಸುತ್ತಿರುವ ವೈದ್ಯರಿಗೆ ಸಲಾಂ ಎಂದ ಪವರ್ ಸ್ಟಾರ್

ಅಗತ್ಯ ಸಮಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ, ನಮ್ಮೆಲ್ಲರ ಆರೋಗ್ಯಕ್ಕಾಗಿ ದಣಿವರಿಯದೆ ಕೆಲಸ ಮಾಡುತ್ತಿರುವ ವೈದ್ಯರನ್ನು ಗೌರವಿಸಬೇಕು ಎಂದು ಪುನೀತ್ ರಾಜ್‍ಕುಮಾರ್ ಮನವಿ ಮಾಡಿದ್ದಾರೆ.

Actor Puneeth Rajkumar
ಪುನೀತ್ ರಾಜ್‍ಕುಮಾರ್

By

Published : Jul 1, 2021, 2:35 PM IST

ಭಾರತದ ಹೆಸರಾಂತ ವೈದ್ಯ ಬಿ.ಸಿ.ರಾಯ್ ಅವರ ಜನ್ಮದಿನ ಮತ್ತು ನಿಧನದ ದಿನವಾದ ಜುಲೈ 1 ಅನ್ನು ರಾಷ್ಟ್ರೀಯ ವೈದ್ಯರ ದಿನವನ್ನಾಗಿ ಆಚರಿಸಲಾಗುತ್ತದೆ. ವೈದ್ಯರ ಸೇವೆಯನ್ನು ಪ್ರಶಂಸಿಸುವುದು ಮತ್ತು ಆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವೈದ್ಯರ ದಿನದ ಉದ್ದೇಶ.

ಅದರಲ್ಲಿಯೂ ಕೊರೊನಾ ಸಮಯದಲ್ಲಿ, ವೈದ್ಯರು ಹಗಲು, ರಾತ್ರಿ ಎನ್ನದೆ ಜನರ ಜೀವ ಉಳಿಸುವ ಕೆಲಸ ಮಾಡುತ್ತಿದ್ದಾರೆ‌. ಈ ಮಧ್ಯೆ ಕೆಲವೆಡೆ ವೈದ್ಯರ ಮೇಲೆ ಹಲ್ಲೆ ನಡೆದಿದ್ದವು. ಹಲವು ಮಂದಿ ಸಿನಿಮಾ ತಾರೆಯರು ವೈದ್ಯರ ಮೇಲಿನ ಹಲ್ಲೆಯನ್ನ ಖಂಡಿಸಿದರು. ಇದೀಗ ನಟ ಪುನೀತ್ ರಾಜ್‍ಕುಮಾರ್ ಕೂಡ ವೈದ್ಯರ ಮೇಲಿನ‌ ಹಲ್ಲೆಯ ಪ್ರಕರಣಗಳನ್ನು ಖಂಡಿಸಿದ್ದಾರೆ. ಜತೆಗೆ ವೈದ್ಯರ ದಿನಾಚರಣೆ ಹಿನ್ನೆಲೆ ಅವರ ಶ್ರಮ, ಕೆಲಸದ ಬಗ್ಗೆ ಕೊಂಡಾಡಿದ್ದಾರೆ.

ವೈದ್ಯರ ಸೇವೆಗೆ ಪುನೀತ್ ರಾಜ್‍ಕುಮಾರ್ ಸಲಾಂ

ಈ‌ ಕೊರೊನಾ ಸಮಯದಲ್ಲಿ ವೈದ್ಯರು ಇಲ್ಲದೇ ಇದ್ರೆ, ನಾವೆಲ್ಲರೂ ತುಂಬಾನೇ ಕಷ್ಟ ಪಡುವ ಪರಿಸ್ಥಿತಿ ಉಂಟಾಗುತ್ತಿತ್ತು. ಹಗಲಿರುಳೆನ್ನದೆ ದುಡಿಯುತ್ತಿರುವ ಅವರ ತ್ಯಾಗಕ್ಕೆ ಎಲ್ಲರೂ ಒಂದು ಸಲಾಂ ಹೇಳಲೇಬೇಕು. ಅಗತ್ಯ ಸಮಯದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ, ನಮ್ಮೆಲ್ಲರ ಆರೋಗ್ಯಕ್ಕಾಗಿ ದಣಿವರಿಯದೆ ಕೆಲಸ ಮಾಡುತ್ತಿರುವ ವೈದ್ಯರನ್ನು ಗೌರವಿಸಬೇಕು ಎಂದು ಪುನೀತ್ ರಾಜ್‍ಕುಮಾರ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಪುನೀತ್​ ಮುಂದಿನ ಚಿತ್ರದ ಟೈಟಲ್​​ launch​... ಸೈಕೋಲಾಜಿಕಲ್​ ಮೂವಿಗೆ ‘ದ್ವಿತ್ವ’ ಹೆಸರಿಟ್ಟ ಹೊಂಬಾಳೆ

ABOUT THE AUTHOR

...view details