ಕರ್ನಾಟಕ

karnataka

ETV Bharat / sitara

ಬಾಲಿವುಡ್​​ನಲ್ಲಿ ಬೆಲ್​​​ ಬಾಟಮ್​​​ ಸಿನಿಮಾ: ರಿಶಭ್​​​ ಶೆಟ್ಟಿ ಹೇಳಿದ್ದೇನು ಗೊತ್ತಾ?

ಬೆಲ್​ ಬಾಟಮ್​ ಸಿನಿಮಾ ಬಾಲಿವುಡ್​ನಲ್ಲಿ ಬರುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡಿದೆ. ಅಕಸ್ಮಾತ್​​ ಕನ್ನಡದ ಕಥೆಯನ್ನು ಕದ್ದು ಬಾಲಿವುಡ್​​ನವರು ಸಿನಿಮಾ ಮಾಡಿದ್ರೆ ರೈಟ್ಸ್​​​ ಪಡೆದುಕೊಂಡವರಿಗೆ ಅನ್ಯಾಯವಾಗುತ್ತದೆ ಎಂದು ರಿಶಭ್​​ ಶೆಟ್ಟಿ ಹೇಳಿದ್ದಾರೆ.

reshab shetty
ರಿಶಬ್​ ಶೆಟ್ಟಿ

By

Published : Nov 27, 2019, 5:24 PM IST

ರಿಶಭ್​ ಶೆಟ್ಟಿ ಮತ್ತು ಹರಿಪ್ರಿಯಾ ಅಭಿನಯದ ಬೆಲ್ ಬಾಟಮ್ ಚಿತ್ರ ರಿಲೀಸ್​ ಆಗಿ ಪ್ರೇಕ್ಷಕ ಮಹಾಶಯನಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿದೆ. ಆದ್ರೆ ಇದೀಗ ಈ ಸಿನಿಮಾದ ಸ್ಟೋರಿಯನ್ನು ಬಾಲಿವುಡ್​​ನವರು ಕದ್ದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದಕ್ಕೆ ಕಾರಣ ಹಿಂದಿಯಲ್ಲಿ ಅಕ್ಷಯ್​​ ಕುಮಾರ್​​ ಅಭಿನಯಿಸುತ್ತಿರುವ ಬೆಲ್​ ಬಾಟಮ್​​ ಸಿನಿಮಾ. ಈ ಬಗ್ಗೆ ಬೆಲ್​ ಬಾಟಮ್​ ನಾಯಕ ರಿಶಭ್​​​ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

ಬಾಲಿವುಡ್​​ನಲ್ಲಿ ಬೆಲ್​ ಬಾಟಮ್​​ ಸಿನಿಮಾ ಬಗ್ಗೆ ರಿಶಭ್​​​ ಶೆಟ್ಟಿ ಪ್ರತಿಕ್ರಿಯೆ

ಸಿನಿಮಾ ರೈಟ್ಸ್​​ ಬಗ್ಗೆ ಮಾತನಾಡಿದ ರಿಷಭ್​​ ಶೆಟ್ಟಿ, ಬೆಲ್​ ಬಾಟಮ್​ ಸಿನಿಮಾ ಬಾಲಿವುಡ್​ನಲ್ಲಿ ಬರುತ್ತಿರುವುದನ್ನು ಮಾಧ್ಯಮಗಳಲ್ಲಿ ನೋಡಿದೆ. ಬಾಲಿವುಡ್​​ನವರು ಕನ್ನಡದ ಸಿನಿಮಾವನ್ನು ಕೊಲಾಬ್ರೇಷನ್​ ಮಾಡಿಕೊಂಡು ಸಿನಿಮಾ ಮಾಡುವುದಾಗಿ ಹೇಳಿದ್ರು. ಅದಕ್ಕಾಗಿ ಅಕ್ಷಯ್​ ಕುಮಾರ್​​ ಟೀಂ​​ಗೆ ರವಿ ವರ್ಮಾ ಸಿನಿಮಾವನ್ನು ತೋರಿಸಿದ್ದಾರೆ. ಹೀಗೆ ಸಿನಿಮಾ ತೋರಿಸಿದ ಒಂದು ವಾರಕ್ಕೆ ಹಿಂದಿ ಬೆಲ್​ ಬಾಟಮ್​ ಸಿನಿಮಾದ ಪೋಸ್ಟರ್​ ಬಿಡುಗಡೆಯಾಗಿದೆ.

ಇದಾದ ನಂತ್ರ ಬಾಲಿವುಡ್​​ ಅಸೋಸಿಯೇಷನ್​​ಗೆ ರವಿ ವರ್ಮಾ ದೂರು ನೀಡಿದ್ದು, ಆ ತೀರ್ಪು ಬರುವುದು 15 ದಿನ ಆಗಬಹುದು. ಅಕಸ್ಮಾತ್​​ ಕನ್ನಡದ ಬೆಲ್​ ಬಾಟಮ್​ ಕಥೆಗೂ ಹಿಂದಿಯ ಆ ಕಥೆಗೂ ಹೊಂದಾಣಿಕೆ ಇದ್ರೆ ರವಿ ವರ್ಮಾ ಕೇಸ್​​ ದಾಖಲು ಮಾಡಬಹುದು ಎಂದು ರಿಶಭ್​​​ ಹೇಳಿದ್ರು.

ABOUT THE AUTHOR

...view details