ನಾಳೆ ಬಿಡುಗಡೆಯಾಗಲು ತಯಾರಾಗಿರುವ ಸೈರಾ ಸಿನಿಮಾಕ್ಕೆ ಕಂಟಕ ಎದುರಾಗಿದ್ದು, ಸಿನಿಮಾದಲ್ಲಿ ಬಳಸಿರುವ ತಪ್ಪು ಸಂಭಾಷಣೆಗಳನ್ನು ತೆಗೆದು ಹಾಕಿ ಎಂದು ಸಿನಿಮಾ ನಿರ್ಮಾಪಕರಿಗೆ ಕೇಂದ್ರ ಚಲನಚಿತ್ರ ಸೆನ್ಸಾರ್ ಮಂಡಳಿ ತಾಕೀತು ಮಾಡಿದೆ.
ಈ ಬಗ್ಗೆ ಆಕ್ಷೇಪಣೆ ಮಾಡಿರುವ ಒಡಿಶಾ ಕಳಿಂಗ ಸೇನಾ ಅಧ್ಯಕ್ಷ ಹೇಮಂತ್ ಕುಮಾರ್, ಸೈರಾ ಸಿನಿಮಾ ಮಾಡುವ ಮೊದಲು ಸಿನಿಮಾ ನಿರ್ಮಾಪಕರು ಸಂಶೋಧನೆ ಮಾಡಬೇಕಿತ್ತು ಎಂದಿದ್ದಾರೆ. ಅಲ್ಲದೆ 1817ರಲ್ಲೇ ಮೊದಲ ಸ್ವಾತಂತ್ರ್ಯ ಹೋರಾಟ ನಡೆದಿತ್ತು ಎಂದು ಹೇಳಿದ್ದಾರೆ. ಈ ವಿಷಯವನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕೂಡ ಪ್ರಸ್ತಾಪ ಮಾಡಿದ್ದರು ಎಂದಿದ್ದಾರೆ.