ಪದ್ಮಾವತಿ ಸೀರಿಯಲ್ನಲ್ಲಿ ಲವರ್ ಬಾಯ್ ಆಗಿ ಮಿಂಚಿದ್ದ ನಟ ತ್ರಿವಿಕ್ರಮ್, ಈಗಾಗಲೇ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಾಗಿದೆ. ಈ ಹಿಂದೆ ನಟಿಸಿದ ಎರಡು ಚಿತ್ರಗಳಲ್ಲಿ ರೋಸ್ ಹಿಡಿದು ಹುಡುಗಿಯರ ಹಿಂದೆ ಹೊರಟಿದ್ದ ತ್ರಿವಿಕ್ರಮ್ ಈಗ ದೆವ್ವದ ಹಿಂದೆ ಬಿದ್ದಿದ್ದಾರೆ.
ತ್ರಿವಿಕ್ರಮ್ ಸದ್ಯ 'ಸಕೂಚಿ' ಹಾರರ್ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದು, ಇಂದು ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ಕಲಾವಿದರ ಸಂಘದಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಸತೀಶ್ ನೀನಾಸಂ, ನಿರ್ಮಾಪಕ ಕೆ. ಮಂಜು, ವಿಧಾನಪರಿಷತ್ ಸದಸ್ಯ ಶರವಣ, ಬಿಬಿಎಂಪಿ ಮಾಜಿ ವಿರೋಧಪಕ್ಷದ ನಾಯಕ ರಮೇಶ್ ಕುಮಾರ್ ಹಾಗೂ ಕನ್ನಡದ ಹಿರಿಯ ನಿರ್ದೇಶಕ ಶಿವಶಂಕರ್ ರೆಡ್ಡಿ ಆಗಮಿಸಿ 'ಸಕೂಚಿ' ಚಿತ್ರತಂಡಕ್ಕೆ ಶುಭ ಹಾರೈಸಿದರು.
'ಸಕೂಚಿ' ಚಿತ್ರವನ್ನು ಹೊಸ ನಿರ್ದೇಶಕ ಅಶೋಕ್ ಅವರು ಕಥೆ- ಚಿತ್ರಕತೆ, ಸಂಭಾಷಣೆ ಬರೆದು ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಚೊಚ್ಚಲ ನಿರ್ದೇಶನದಲ್ಲೇ ಅಶೋಕ್ 'ಹಾರರ್' ಚಿತ್ರಕ್ಕೆ ಕೈ ಹಾಕಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಚಿತ್ರದುರ್ಗ, ಹಿರಿಯೂರು, ಬೆಂಗಳೂರು ಹಾಗೂ ಕೊಟ್ಟಿಗೆಹಾರದಲ್ಲಿ ಸುಮಾರು 65 ದಿನ ಶೂಟಿಂಗ್ ನಡೆಸಿದ್ದರು.
ಈ ಚಿತ್ರದ ಮತ್ತೊಂದು ಹೈಲೆಟ್ಸ್ ಅಂದ್ರೆ 40 ಮಂಗಳಮುಖಿಯರು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ನಟ ತ್ರಿವಿಕ್ರಮ್ ಕೂಡ ತುಂಬ ಕುತೂಹಲಕಾರಿಯಾದ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿನ ಒಂದು ಸೀನ್ಗಾಗಿ ಸ್ಮಶಾನದಲ್ಲಿ ಸುಮಾರು ಅರು ಅಡು ಗುಂಡಿ ತೆಗೆದು, ಗುಂಡಿಯೋಳಗೆ ತ್ರಿವಿಕ್ರಮ್ ಅವರನ್ನು ಇಳಿಸಿ ಚಿತ್ರದ ಶೂಟಿಂಗ್ ಮಾಡಲಾಗಿತ್ತು. ಇದರಿಂದ ಸಾಕಷ್ಟು ತೊಂದರೆ ಅನುಭವಿಸಿದ್ದಾಗಿ ನಿರ್ದೇಶಕ ಅಶೋಕ್ ಹೇಳಿದ್ದಾರೆ.
'ಸಕೂಚಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಚಿತ್ರದಲ್ಲಿ ತ್ರಿವಿಕ್ರಮ್ಗೆ ನಾಯಕಿಯಾಗಿ ರೂಪದರ್ಶಿ ಡಯಾನ ಮೇರಿ ನಟಿಸಿದ್ದು, ಇದು ಅವರ ಚೊಚ್ಚಲ ಚಿತ್ರ. ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು, ಗಣೇಶ್ ಗೋವಿಂದ ಸ್ವಾಮಿ ಸಂಗೀತ ನೀಡಿದರೇ ಸಂಚಿತ್ ಹೆಗಡೆ, ಟಗರು ಖ್ಯಾತಿಯ ಆಥೋಷಿ ದಾಸ್ ಮತ್ತು ಅನನ್ಯಾ ಭಟ್ ಹಾಡಿದ್ದಾರೆ. ಹೃದಯ ಶಿವ ಗೀತೆ ರಚನೆ ಮಾಡಿದ್ದಾರೆ.
ಆನಂದ್ ನುಂದಳೇಶ್ ಛಾಗಾಗ್ರಹಣ ಇರುವ ಈ ಚಿತ್ರಕ್ಕೆ ಮಹೇಶ್ ತೊಗಟ ಸಂಕಲನ ಮಾಡಿದ್ದಾರೆ. ಕುಂಪು ಚಂದ್ರು ಸಾಹಸ ಸಂಯೋಜಿಸಿದ್ದಾರೆ. ಇನ್ನು ಈ ಚಿತ್ರಕ್ಕೆ ಮಹಾವೀರ್ ಪ್ರಸಾದ್, ಚಂದ್ರು ಹಾಗೂ ಮಧುಕರ್ ಎಂಬುವರು ನಿರ್ಮಾಣ ಮಾಡಿದ್ದು ಸದ್ಯ ಚಿತ್ರತಂಡ ಪೊಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದೆ.